ರೊಟ್ಟಿ ಹಿಟ್ಟು ತಟ್ಟಿ ಒಳ ಉಡುಪಿನೊಳಗಿಟ್ಟು ಬೇಯಿಸುವ ಮಹಿಳೆ: ವಿಡಿಯೋ ವೈರಲ್

Krishnaveni K

ಸೋಮವಾರ, 3 ಫೆಬ್ರವರಿ 2025 (12:40 IST)
Photo Credit: X
ಮುಂಬೈ: ರೊಟ್ಟಿ ಹಿಟ್ಟನ್ನು ತಟ್ಟಿ ಒಳ ಉಡುಪಿನೊಳಗೆ ಇಟ್ಟು ಮತ್ತೆ ಹೊರತೆಗೆದು ಬೇಯಿಸುವ ಮಹಿಳೆಯ ಅಸಹ್ಯ ವರ್ತನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ಸಮಯದ ಹಿಂದೆ ಮನೆ ಕೆಲಸದಾಕೆಯೊಬ್ಬಳು ಚಪಾತಿ ಹಿಟ್ಟು ಕಲಸಲು ತನ್ನ ಮೂತ್ರವನ್ನೇ ಬಳಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧ ಮಹಿಳೆಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಮನೆಕೆಲಸದಾಕೆಯ ವಿಡಿಯೋ ವೈರಲ್ ಆಗಿದೆ.

ಮನೆ ಕೆಲಸದ ಮಹಿಳೆ ರೊಟ್ಟಿ ತಟ್ಟುತ್ತಿರುತ್ತಾಳೆ. ಒಂದೊಂದೇ ರೊಟ್ಟಿ ತಟ್ಟಿದ ಬಳಿಕ ತನ್ನ ಎದೆಭಾಗದಲ್ಲಿಟ್ಟುಕೊಂಡು ಹೊರಗೆ ತೆಗೆದು ತವಾದಲ್ಲಿ ಬೇಯಿಸುತ್ತಾಳೆ. ಈ ದೃಶ್ಯ ಅಡುಗೆ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಅಡುಗೆಗೆಂದು ಮನೆ ಕೆಲಸದವರನ್ನು ನೇಮಿಸುವ ಮೊದಲು ಎಚ್ಚರಿಕೆಯಿರಲಿ. ಇಂತಹವರಿಂದ ಮನೆಯವರ ಜೀವಕ್ಕೇ ಅಪಾಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.

चोरी CCTV में पकड़ी गई। ???? pic.twitter.com/dzDeT6ao9i

— कामिनी यादव (@kaminiyadav92) January 29, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ