ಮುಂಬೈ ದಾಳಿಗೆ ತಹವ್ವೂರ್ ರಾಣಾ ಸಂಚು ಮಾಡಿದ್ದು ಹೇಗೆ: ಡೆಡ್ಲಿ ರಾಣಾ ಕತೆ ಇಲ್ಲಿದೆ

Sampriya

ಗುರುವಾರ, 10 ಏಪ್ರಿಲ್ 2025 (16:22 IST)
Photo Courtesy X
ಬೆಂಗಳೂರು: 26/11 ಮುಂಬೈ ದಾಳಿಯ ಸಂಚುಕೋರ ಉಗ್ರ ತಹವ್ವೂರ್ ರಾಣಾನನ್ನು ಗುರುವಾರ ಅಮೆರಿಕದಿಂದ ಭಾರತಕ್ಕೆ ಕರೆತಲಾಗಿದೆ. ಏನಿದು ಪ್ರಕರಣ.  

2008ರ ಮುಂಬೈನ 10 ಕಡೆ ನಡೆದ ದಾಳಿಯಲ್ಲಿ ಸುಮಾರು 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪಾಕ್‌ನ 10 ಉಗ್ರರು ನಡೆಸಿದ ಈ ದಾಳಿಯ ಹಿಂದಿರುವ ಮಾಸ್ಟರ್‌ ಮೈಂಡ್‌ ತಹವ್ವೂರ್ ರಾಣಾ.

ಅಂದು ಪಾಕಿಸ್ತಾನ 10 ಉಗ್ರರು ಮುಂಬೈಗೆ ಪ್ರವೇಶಿಸಿ, 10 ಸ್ಥಳಗಳಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸುತ್ತಾರೆ. ಈ ದಾಳಿಗೆ ಜನಸಾಮಾನ್ಯರು, ಪೊಲೀಸರು ಹಾಗೂ ಸೈನಿಕರು ಸೇರಿದಂತೆ 166 ಮಂದಿ ಬಲಿಯಾಗುತ್ತಾರೆ.  

ಪಾಕ್‌ ಉಗ್ರರು ಮುಂಬೈಗೆ ಪ್ರವೇಶಿಸಲು ಪ್ಲ್ಯಾನ್ ಮಾಡಿದವನೇ ಈ ರಾಣಾ. ಡೇವಿಡ್ ಹೆನ್ರಿ ಎಂಬ ವ್ಯಕ್ತಿಯನ್ನು ಭಾರತಕ್ಕೆ ಕಳುಹಿಸಿ, ಮುಂಬೈನ 10 ಪ್ರದೇಶಗಳನ್ನು ಗುರುತಿಸಿಕೊಡುವಂತೆ ಹೇಳುತ್ತಾನೆ. ಅದಲ್ಲದೆ ಪಾಕ್‌ ಉಗ್ರರೊಂದಿಗೆ ಡೇವಿಡ್ ಹೆನ್ರಿಯನ್ನು ಪರಿಚಯಿಸುತ್ತಾನೆ. ರಾಣಾ ಮಾಸ್ಟರ್‌ ಮೈಂಡ್‌ನಂತೆ ಪಾಕ್‌ ಉಗ್ರರು ಮುಂಬೈಗೆ ನುಗ್ಗಿ, ಕಂಡ ಕಂಡಲ್ಲಿ ಗುಂಡಿನ ದಾಳಿ ನಡೆಸುತ್ತಾರೆ.

ಇದೀಗ ಮೋಸ್ಟ್‌ ವಾಟೆಂಡ್‌ ಉಗ್ರನನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಅದಲ್ಲದೆ ಆತನ ಮರಣದಂಡನೆಗೆ ಭಾರೀ ಒತ್ತಾಯ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ