ಮುಂಬೈ ದಾಳಿಕೋರ ರಾಣಾಗೆ ಭಾರತದಲ್ಲಿ ಭರ್ಜರಿ ಭದ್ರತೆ: ಆತನಿಗಾಗಿ ಏನೆಲ್ಲಾ ಸಿದ್ಧತೆಯಾಗಿದೆ ನೋಡಿ
2008 ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ತಹವ್ವೂರ್ ರಾಣಾ ಅಮೆರಿಕಾದಿಂದ ಗಡೀಪಾರಾಗಿದ್ದು ಭಾರತಕ್ಕೆ ಬರುತ್ತಿದ್ದಾನೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಆತ ದೆಹಲಿಯ ಪಾಲಂ ಏರ್ ಬೇಸ್ ನಲ್ಲಿ ಬಂದಿಳಿಯಲಿದ್ದಾನೆ.
ಈತನನ್ನು ಬಿಗಿ ಭದ್ರತೆಯಲ್ಲಿ ಕರೆತರಲು ಎನ್ ಐಎ ಅಧಿಕಾರಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಏರ್ ಬೇಸ್ ಗೆ ಬಂದಿಳಿದ ತಕ್ಷಣ ಆತನನ್ನು ಕರೆದೊಯ್ಯಲು ವಿಶೇಷ ಬುಲೆಟ್ ಪ್ರೂಫ್ ವಾಹನ ರೆಡಿಯಾಗಿದೆ. ಈ ವಾಹನ ಬಾಂಬ್ ಬಿದ್ದರೂ ಅಲ್ಲಾಡಲ್ಲ.
ಇಲ್ಲಿಂದ ಆತನನ್ನು ಸೀದಾ ಎನ್ಐಎ ಕಚೇರಿಗೆ ಕೊಂಡೊಯ್ಯುವ ಸಾಧ್ಯತೆಯಿದೆ. 17 ವರ್ಷಗಳ ಬಳಿಕ ರಾಣಾನನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ. ಈತನನ್ನು ಬಿಗಿ ಭದ್ರತೆಯಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗುತ್ತದೆ.