ಬಾಂದ್ರಾದಲ್ಲಿ ಸೈಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ 26 ವರ್ಷ ವಯಸ್ಸಿನ ನೂರ್ ಸಾಹೇಬ್ ಶೇಖ್, ಬಿಜಿನೆಸ್ ಮಾಡಲು ಹಣ ಬೇಕಾಗಿದೆ ಎಂದು ಹೇಳಿ ಯುವತಿಯರಿಂದ ಹಣ ಪಡೆದು ನಂತರ ಅವರಿಂದ ದೂರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನೂರ್ ಸಾಹೇಬ್ ಶೇಖ್, ಅವಿವಾಹಿತ ಯುವತಿಯರನ್ನು ಗುರಿಯಾಗಿಸಿಕೊಂಡು ದಾಳ ಎಸೆಯುತ್ತಿದ್ದ, ದಾಳಕ್ಕೆ ಬಿದ್ದ ಕೂಡಲೇ ಬಿಜೆನೆಸ್ ಆರಂಭಿಸಲು ಹಣ ಬೇಕಾಗಿದೆ ಎಂದು ಯುವತಿಯನ್ನು ನಂಬಿಸಿ ಅವರಿಂದ ಚಿನ್ನಾಭರಣಗಳನ್ನು ಪಡೆದುಕೊಂಡು ನಂತರ ಅವರನ್ನು ನಿರ್ಲಕ್ಷಿಸಲು ಆರಂಭಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.