ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ : ರಾಜ್ಯ ಉಸ್ತುವಾರಿಗೆ ಕೋಕ್

ಶುಕ್ರವಾರ, 11 ಸೆಪ್ಟಂಬರ್ 2020 (22:45 IST)
ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ನಡೆಯುತ್ತಿದ್ದು, ಇದರ ಮೊದಲ ಭಾಗವಾಗಿ ಕಾರ್ಯಕಾರಿ ಸಮಿತಿಯನ್ನು ಬದಲು ಮಾಡಿದ್ದಲ್ಲದೇ ಕೇಂದ್ರ ಚುನಾವಣಾ ಪ್ರಾಧಿಕಾರವನ್ನು ಪುನರಚನೆ ಮಾಡಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಈ ನೂತನ ಆದೇಶ ಹೊರಡಿಸಿದ್ದು, ಇದರಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿದ್ದ ಕೆ.ಸಿ.ವೇಣುಗೋಪಾಲ್ ಗೆ ಕೋಕ್ ನೀಡಲಾಗಿದ್ದು, ರಣದೀಪ್ ಸಿಂಗ್ ಸುರ್ಜೆವಾಲ್ ಗೆ ರಾಜ್ಯ ಉಸ್ತುವಾರಿಯ ಹೊಣೆ ವಹಿಸಲಾಗಿದೆ.

ದಿನೇಶ್ಗುಂಡೂರಾವ್​​ ಅವರಿಗೆ ಗೋವಾ, ತಮಿಳುನಾಡು, ಪಾಂಡಿಚೇರಿ ಉಸ್ತುವಾರಿ ವಹಿಸಲಾಗಿದೆ.

ಮಹಾರಾಷ್ಟ್ರಕ್ಕೆ ಹೆಚ್​​.ಕೆ ಪಾಟೀಲ್ ಉಸ್ತುವಾರಿಗಳಾಗಿದ್ದಾರೆ.

ಮಾಜಿ ಸಚಿವ ಕೃಷ್ಣ ಬೈರೇಗೌಡ ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಜೊತೆಗೆ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆಗಲು ಆಗುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ