ಮಹಿಳೆಯನ್ನು ಅಪ್ಪಿಕೊಳ್ಳುವುದು, ಸ್ಪರ್ಶಿಸುವುದು ಅಪರಾಧವಲ್ಲ : ಬ್ರಿಜ್ ಭೂಷಣ್

ಶುಕ್ರವಾರ, 11 ಆಗಸ್ಟ್ 2023 (08:02 IST)
ನವದೆಹಲಿ : ಒಲಿಂಪಿಕ್ಸ್ ವಿಜೇತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನ್ಯಾಯಾಲಯದಲ್ಲಿ ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ.
 
ವಿಚಾರಣೆ ವೇಳೆ ಯಾವುದೇ ರೀತಿಯ ಲೈಂಗಿಕ ಉದ್ದೇಶವಿಲ್ಲದೇ ಮಹಿಳೆಯನ್ನ ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಬಿಜೆಪಿ ಸಂಸದನ ಪರ ಹಾಜರಾದ ವಕೀಲ ರಾಜೀವ್ ಮೋಹನ್, ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪಗಳು ಕಾಲಮಿತಿಯನ್ನು ಮೀರಿ ಹೋಗಿವೆ.

ಕುಸ್ತಿಪಟುಗಳು 5 ವರ್ಷಗಳವರೆಗೂ ಈ ಬಗ್ಗೆ ದೂರು ಸಲ್ಲಿಸಿರಲಿಲ್ಲ. ಏಕೆಂದರೆ ತಮಗೆ ತಮ್ಮ ವೃತ್ತಿ ಜೀವನದ ಬಗ್ಗೆ ಚಿಂತೆ ಇತ್ತು ಅಂತಾ ಹೇಳಿದ್ದಾರೆ. ಆದ್ರೆ ಇದು ಸೂಕ್ತ ವಿವರಣೆ ಅಲ್ಲ. ಅವರ ನಿರೀಕ್ಷಿತ ಯೋಜನೆಗಳು ಈಗ ಬಯಲಾಗುತ್ತಿವೆ ಎಂದು ಭೂಷಣ್ ಪರ ವಕೀಲರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ