ಯೆಮನ್: ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡ ನೀ ಹೌತಿ ಉಗ್ರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಹೌತಿ ಉಗ್ರರ ಪಡೆಯ ವಕ್ತಾರ ಮೊಹಮ್ಮದ್ ಅಬ್ದುಲ್ ಸಲಾಮ್ ಈ ಕುರಿತು ಪ್ರತಿಕ್ರಿಯೆ ನೀಡಿ, ಇದೊಂದು ಘೋರ ಮೂರ್ಖತನ ಎಂದು ಕಿಡಿ ಕಾರಿದ್ದಾನೆ. ಕಾರ್ಯಾಚರಣೆ ಮುಂದುವರೆಸುವುದಾಗಿ ಹೇಳಿರವ ಯುಕೆ -ಯುಎಸ್ ಪಡೆಗಳು, ಹೌತಿ ಉಗ್ರರ 16 ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾರಂಭಿಸಿದೆ.
ಅಮೆರಿಕ ಮತ್ತು ಬ್ರಿಟನ್ ನಡೆಸಿದ ಜಂಟಿ ಏರ್ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಹಲವು ಮಂದಿ ಹೌತಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಯುದ್ದದಲ್ಲಿ ಪ್ಯಾಲೆಸ್ಟೈನ್ ಗೆ ಬೆಂಬಲ ಘೋಷಿಸಿದ್ದ ಹೌತಿ ಉಗ್ರರು ಕೆಂಪು ಸಮುದ್ರದ ಮೂಲಕ ಸಂಚರಿಸುವ ಹಡಗುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದರು.