ಮಹಿಳೆ ಯಾವುದೇ ವೃತ್ತಿಯಲ್ಲಿದ್ದರೂ ಘನತೆಗೆ ಅರ್ಹಳು: ಸುಪ್ರಿಯಾ ಹೇಳಿಕೆಯಿಂದ ನೋವಾಗಿದೆ ಎಂದ ರಂಗನಾ ರಣಾವತ್

Sampriya

ಮಂಗಳವಾರ, 26 ಮಾರ್ಚ್ 2024 (14:48 IST)
Photo Courtesy X
ಪಂಜಾಬ್:  ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರ ಪೋಸ್ಟ್‌ನಿಂದ ನನಗೆ ನೋವಾಗಿದೆ ಎಂದು ಬಾಲಿವುಡ್ ನಟಿ, ಮಂಡಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್  ಹೇಳಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಬಳಿ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಯುವ ಯಾವುದೇ ವೃತ್ತಿಯಲ್ಲಿದ್ದರೂ ಘನತೆಗೆ ಅರ್ಹಳಾಗಿರುತ್ತಾಳೆ. ನನಗೆ ಹೆಚ್ಚು ನೋಯಿಸಿದ್ದು ಮಂಡಿ ವಿಷಯವಾಗಿದೆ ಎಂದರು.

ಇನ್ನೂ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಂಗನಾ ರಣಾವತ್ ಅವರ ಅರೆ ಬಟ್ಟೆಯ ಫೋಟೋವನ್ನು ಶೇರ್ ಮಾಡಿ, ಕೇವಲವಾಗಿ ಬರೆದಿದ್ದರು.

ಇವರ ಈ ಹೇಳಿಕೆಗೆ ಬಿಜೆಪಿ ನಾಯಕರು ಸೇರಿದಂತೆ ಅನೇಕರು ವಿರೋಧವನ್ನು ವ್ಯಕ್ತಪಡಿಸಿದರು. ವಿಷಯ ಗಂಭೀರವಾಗುತ್ತಿದ್ದ ಹಾಗೇ ಸುಪ್ರಿಯಾ ಶ್ರಿನಾಟೆ ಅವರು ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ತಾನು ಎಂದಿಗೂ ಇನ್ನೊಬ್ಬ ಮಹಿಳೆಯನ್ನು ಕೀಳಾಗಿ ಕಾಣುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ನಂತರ ಕಾಂಗ್ರೆಸ್‌ ನಾಯಕಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರನೌತ್ ಹೇಳಿದ್ದಾರೆ. ಘಟನೆ ಸಂಬಂಧ ನಡ್ಡಾ ಅವರು ದೆಹಲಿಗೆ ಕರೆದಿರುವುದಾಗಿ ರಣಾವತ್ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ