ಲೋಕಸಭೆ ಚುನಾವಣೆ 2024: 6ನೇ ಪಟ್ಟಿ ಪ್ರಕಟಸಿದ ಕಾಂಗ್ರೆಸ್

Sampriya

ಸೋಮವಾರ, 25 ಮಾರ್ಚ್ 2024 (18:16 IST)
Photo Courtesy X
ನವದೆಹಲಿ:  ರಾಜಸ್ಥಾನ ಮತ್ತು ತಮಿಳುನಾಡಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಐವರು ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಪಕ್ಷವು ರಾಜಸ್ಥಾನದಿಂದ ನಾಲ್ವರು ಮತ್ತು ತಮಿಳುನಾಡಿನಿಂದ ಒಬ್ಬ ಅಭ್ಯರ್ಥಿಯನ್ನು ಘೋಷಿಸಿದೆ.

ರಾಜಸ್ಥಾನದಲ್ಲಿ, ಪಕ್ಷವು ಅಜ್ಮೀರ್ ಲೋಕಸಭಾ ಕ್ಷೇತ್ರದಿಂದ ರಾಮಚಂದ್ರ ಚೌಧರಿ, ರಾಜಸಮಂದ್‌ನಿಂದ ಸುದರ್ಶನ್ ರಾವತ್, ಭಿಲ್ವಾರಾದಿಂದ ದಾಮೋದರ್ ಗುರ್ಜಾರ್ ಅವರನ್ನು ಕಣಕ್ಕಿಳಿಸಿದೆ, ಆದರೆ ಕೋಟಾ ಕ್ಷೇತ್ರದಲ್ಲಿ ಪ್ರಹ್ಲಾದ್ ಗುಂಜಾಲ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಎದುರಿಸಲಿದ್ದಾರೆ.


ರಾಜಸ್ಥಾನವು 25 ಸಂಸದೀಯ ಕ್ಷೇತ್ರಗಳನ್ನು ಹೊಂದಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಂತ 1 (ಏಪ್ರಿಲ್ 19) 12 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 13 ಸ್ಥಾನಗಳಿಗೆ ಎರಡನೇ ಹಂತದಲ್ಲಿ (ಏಪ್ರಿಲ್ 26) ಮತದಾನ ನಡೆಯಲಿದೆ.

ತಮಿಳುನಾಡಿನಲ್ಲಿ, ಸಿ ರಾಬರ್ಟ್ ಬ್ರೂಸ್ ಅವರು ತಿರುನಲ್ವೇಲಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ.

ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.
ಥರಾಹೈ ಕತ್ಬರ್ಟ್ ಅವರು ತಮಿಳುನಾಡಿನ ವಿಲವಂಕೋಡ್ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಇದಕ್ಕೂ ಮುನ್ನ, ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಗೆ ಮೂರು ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಈ ಹಿಂದೆ ಘೋಷಿಸಿದಂತೆ ಸುನಿಲ್ ಶರ್ಮಾ ಬದಲಿಗೆ ಜೈಪುರದಿಂದ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರನ್ನು ಹೆಸರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ