ಮದುವೆಯಾಗುವ ನೆಪದಲ್ಲಿ ಹುಡುಗಿಯನ್ನು ಅಪಹರಿಸಿದ ವಿವಾಹಿತ

ಸೋಮವಾರ, 4 ಜನವರಿ 2021 (08:36 IST)
ಚೆನ್ನೈ : ಸರ್ಕಾರಿ ಉದ್ಯೋಗದಲ್ಲಿರುವ 33 ವರ್ಷದ ವ್ಯಕ್ತಿಯೊಬ್ಬ ಮದುವೆಯ ನೆಪದಲ್ಲಿ  10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಗೆ ಈಗಾಗಲೇ ಮದುವೆಯಾಗಿ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಆದರೂ ಈತ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಭೇಟಿ ಮಾಡುವಂತೆ ಹೇಳಿ ಅಪಹರಿಸಿದ್ದಾನೆ.

ಹುಡುಗಿ ಮನೆಗೆ ಮರಳದ ಹಿನ್ನಲೆಯಲ್ಲಿ ಆಕೆಯ ಮನೆಯವರು ಪೊಲೀಸರು ದೂರುನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ. ಪೊಲೀಸರು ಹುಡುಗಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ