ವಿವಾಹ ವಯೋಮಿತಿ ಏರಿಕೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ
ಗುರುವಾರ, 14 ಜನವರಿ 2021 (10:34 IST)
ಇಂಧೋರ್: ಮಹಿಳೆಯರ ಮದುವೆ ವಯೋಮಿತಿಯನ್ನು ಏರಿಕೆ ಮಾಡುವ ಮಧ‍್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರಸ್ತಾಪವನ್ನು ವಿರೋಧಿಸುವಾಗ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
ಹುಡುಗಿಯರು 15 ನೇ ವಯಸ್ಸಿಗೆ ಇನ್ನೊಂದು ಜೀವಕ್ಕೆ ಜನ್ಮನೀಡುವ ಸಾಮರ್ಥ್ಯ ಪಡೆಯುತ್ತಾರೆ ಎಂದು ವೈದ್ಯರೇ ಹೇಳುತ್ತಾರೆ. ಹಾಗಿರುವ ಯುವತಿಯರಿಗೆ ವಿವಾಹದ ವಯೋಮಿತಿ ಏರಿಕೆ ಮಾಡುವ ಅಗತ್ಯವೇನು? ಸಿಎಂ ಚೌಹಾಣ್ ಏನು ವಿಜ್ಞಾನಿಯಾ? ವೈದ್ಯರಾ? ಎಂದು ಸಜ್ಜನ್ ಸಿಂಗ್ ಪ್ರಶ್ನಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ವಿವಾಹದ ವಯೋಮಿತಿಯನ್ನು 18 ರಿಂದ 21 ಕ್ಕೇರಿಸುವ ಬಗ್ಗೆ ಸಿಎಂ ಪ್ರಸ್ತಾಪವಿಟ್ಟಿದ್ದರು. ಅದನ್ನು ವಿರೋಧಿಸುವಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ.