ಪತ್ನಿಯನ್ನು ಕೊಂದು ಮಗಳ ಜತೆ ಮೃತದೇಹದ ಬಳಿಯೇ ಕಾವಲು ಕೂತ ಪತಿ!
24 ವರ್ಷದ ಕಮಿಲ್ ಎಂಬಾತ ತನ್ನ 22 ವರ್ಷದ ಪತ್ನಿ ರೇಶ್ಮಾಳನ್ನು ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ. ಬಳಿಕ 2 ವರ್ಷದ ಪುತ್ರಿಯನ್ನು ತೊಡೆ ಮೇಲೆ ಕೂರಿಸಿಕೊಂಡು ರಾತ್ರಿಯಿಡೀ ಕಳೆದಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಆದರೆ ಮೃತ ರೇಶ್ಮಾ ಮನೆಯವರು ಕಮಿಲ್ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆಂದು ದೂರು ನೀಡಿದ್ದು, ಇದೀಗ ಆರೋಪಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆಪಾದನೆ ದಾಖಲಾಗಿದೆ.