ಹಣದ ವಿಚಾರಕ್ಕೆ ಮಹಿಳೆಯನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು
ಭಾನುವಾರ, 21 ಅಕ್ಟೋಬರ್ 2018 (08:46 IST)
ಬೆಂಗಳೂರು : ಹಣದ ವಿಚಾರವಾಗಿ ಮಹಿಳೆಯನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ.
ಶಾಂತಿ (52) ಕೊಲೆಯಾದ ಮಹಿಳೆ. ಬಾಣಸವಾಡಿಯ ಕರಿಯಣ್ಣಪಾಳ್ಯದ ನಿವಾಸಿಯಾದ ಇವರು ಸುಂದರ್ ಎಂಬುವವರಿಗೆ 50 ಸಾವಿರ ರೂ. ಹಣವನ್ನು ನೀಡಬೇಕಾಗಿರುವುದರಿಂದ ಈ ವಿಚಾರವಾಗಿ ಶಾಂತಿ ಜೊತೆ ಯುವಕರ ಗುಂಪೊಂದು ಜಗಳ ಮಾಡಿದ್ದಾರೆ.
ಆನಂತರ ಅಕ್ಟೋಬರ್ 9 ರಂದು ಶಾಂತಿಯನ್ನು ಹಣಕಾಸಿನ ವಿಚಾರವಾಗಿ ಕರೆಸಿಕೊಂಡು ಬಾಣಸವಾಡಿಯಿಂದ ಕಿಡ್ನಾಪ್ ಮಾಡಿದ್ದಾರೆ. ಅಕ್ಟೋಬರ್ 10 ರಂದು ಬಾಣಸವಾಡಿ ಠಾಣೆಯಲ್ಲಿ ಶಾಂತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಶನಿವಾರ (ಅ.20)ದಂದು ಶಾಂತಿಯನ್ನು ಕೊಲೆ ಮಾಡಿ ಬಳಿಕ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ಮೃತದೇಹ ಎಸೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನಾಗರಾಜ್, ಚೆಲುವ ಅಲಿಯಾಸ್ ಮೋಹನ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಈ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.