ಚಲಿಸುತ್ತಿದ್ದ ರೈಲಿಗೆ ಪತ್ನಿಯ ನೂಕಿ ಕೊಂದ ಪತಿ
ಈ ದೃಶ್ಯಗಳೆಲ್ಲಾ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಗಂಡ-ಹೆಂಡತಿ ನಡುವೆ ಜಗಳವಾಗಿದ್ದನ್ನು ಕೆಲವರು ನೋಡಿದ್ದರು. ಇದಾದ ಬಳಿಕ ಪತ್ನಿ ಇಬ್ಬರು ಮಕ್ಕಳೊಂದಿಗೆ ಫ್ಲ್ಯಾಟ್ ಫಾರಂನಲ್ಲೇ ಮಲಗಿ ನಿದ್ರಿಸಿದ್ದಳು. ಬೆಳಗಿನ ಜಾವ ಪತ್ನಿಯನ್ನು ಎಬ್ಬಿಸಿ ಎಳೆದು ತಂದು ಪತಿ ಚಲಿಸುತ್ತಿದ್ದ ರೈಲಿನತ್ತ ನೂಕಿದ್ದಾನೆ. ತಕ್ಷಣವೇ ಮಹಿಳೆ ಸಾವನ್ನಪ್ಪಿದ್ದಾಳೆ. ಬಳಿಕ ಪತಿ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ.