ನನಗೆ 52 ವಯಸ್ಸು.. ಈಗಲೂ ಸ್ವಂತ ಮನೆಯೇ ಇಲ್ಲ : ರಾಹುಲ್ ಗಾಂಧಿ

ಭಾನುವಾರ, 26 ಫೆಬ್ರವರಿ 2023 (17:30 IST)
ರಾಯ್ಪುರ : ನನಗೀಗ 52 ವಯಸ್ಸು. ಆದರೆ ನನಗೆ ಸ್ವಂತ ಮನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
 
ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ನ 85ನೇ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ವಿಚಿತ್ರ ಪರಿಸ್ಥಿತಿ ಇತ್ತು. ನಾನು ಅಮ್ಮನ ಬಳಿಗೆ ಹೋಗಿ ಏನಾಯಿತು ಎಂದು ಕೇಳಿದೆ.

ನಾವು ಮನೆಯಿಂದ ಹೊರಡುತ್ತಿದ್ದೇವೆ ಎಂದರು. ಇದು ನನ್ನ ಮನೆ ಅಲ್ಲವೇ ಎಂದು ನಾನು ಕೇಳಿದೆ. ಆಗ ಅಮ್ಮ, ಇದು ನಮ್ಮ ಮನೆ ಅಲ್ಲ, ಸರ್ಕಾರದ್ದು ಎಂದರು ಎಂದು ರಾಹುಲ್ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.

ಹಾಗಾದರೆ ನಾವು ಎಲ್ಲಿಗೆ ಹೋಗೋದು ಎಂದು ನಾನು ಕೇಳಿದೆ. ಅದಕ್ಕೆ ಅಮ್ಮ, ಗೊತ್ತಿಲ್ಲ ಎಂದರು. ನನಗೆ ಈಗ 52 ವರ್ಷ ವಯಸ್ಸು. ಇನ್ನೂ ನನಗೆ ಮನೆ ಇಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ