ನವಜೋತ್ ಸಿಂಗ್ ಬಿಜೆಪಿ ತೊರೆದಿರುವ ಕಾರಣ ಗೊತ್ತಿಲ್ಲ: ನವಜೋತ್ ಕೌರ್
ಮಂಗಳವಾರ, 19 ಜುಲೈ 2016 (12:18 IST)
ಪತಿ ನವಜೋತ್ ಸಿಂಗ್ ಸಿದ್ದು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಕಾರಣಗಳ ಬಗ್ಗೆ ಮಾಹಿತಿಯಿಲ್ಲ ಎಂದು ಬಿಜೆಪಿ ನಾಯಕಿ ನವಜೋತ್ ಕೌರ್ ಹೇಳಿದ್ದಾರೆ
ಪಂಜಾಬ್‌ನ ಮುಖ್ಯ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ನವಜೋತ್ ಕೌರ್ ರಾಜೀನಾಮೆ ನೀಡಿದ್ದಾರೆ ಎನ್ನುವ ವರದಿಗಳನ್ನು ತಳ್ಳಿ ಹಾಕಿದ ಅವರು, ಸದ್ಯ ನಾನು ಬಿಜೆಪಿಯಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪತಿ ನವಜೋತ್ ಸಿದ್ದು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರೆ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂಗಾರು ಅಧಿವೇಶನದ ಆರಂಭದ ದಿನದಂದು ನವಜೋತ್ ಸಿಂಗ್ ಸಿದ್ದು, ವೈಯಕ್ತಿಕವಾಗಿ ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿಯವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ನಂತರ, ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್, ಸಿದ್ದು ರಾಜೀನಾಮೆ ನೀಡಿರುವ ಬಗ್ಗೆ ಸದನದಲ್ಲಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.