ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್
ಜೂನ್ 2 ರಂದು ಮೇಘಾಲಯದ ಕಮರಿಯಲ್ಲಿ ರಾಜ ರಘುವಂಶಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೋನಂ ಮತ್ತು ಸಹಚರರು ಆತನನ್ನು ಪ್ಲ್ಯಾನ್ ಮಾಡಿ ಬೆಟ್ಟ ಹತ್ತಿಸಿ ಅಲ್ಲಿ ತಲೆಗೆ ಹೊಡೆದು ಕೊಲೆ ಮಾಡಿ ಕಮರಿಗೆ ಎಸೆದಿದ್ದಾರೆ ಎಂದು ಆರೋಪವಾಗಿದೆ.
ಇದೀಗ ಸೋನಂ ಜೊತೆ ರಾಜ ರಘುವಂಶಿ ಬೆಟ್ಟ ಹತ್ತುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದ ವಿಡಿಯೋದಲ್ಲಿ ಇಬ್ಬರನ್ನೂ ಕಾಣಬಹುದಾಗಿದೆ. ದೇವ್ ಸಿಂಗ್ ಎಂಬವರು ಇದನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ದಂಪತಿಯನ್ನು ನಾನು ನೋಡಿದ್ದೆ. ನಾನು ಮಾಡಿದ್ದ ವಿಡಿಯೋದಲ್ಲಿ ಈ ಇಬ್ಬರೂ ಇದ್ದಿದ್ದು ಕಂಡುಬಂದಿದೆ ಎಂದಿದ್ದಾರೆ. ಈ ವಿಡಿಯೋದಲ್ಲಿ ಸೋನಂ ಮುಂದಿದ್ದರೆ ಅವಳ ಹಿಂದೆಯೇ ರಾಜ ರಘುವಂಶಿ ಕೂಡಾ ಹೆಜ್ಜೆ ಹಾಕುತ್ತಿದ್ದಾರೆ.