ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ನಡೆದ ಯುವ-ಸಂವಾದಾತ್ಮಕ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ನನಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಇಷ್ಟವಾಗಲ್ಲ. ಚಿತ್ರಮಂದಿರದಲ್ಲಿ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಕಳೆಯುವ ವಿರಾಮದ ಸಮಯವನ್ನು ಈಗ ಒಬ್ಬರ ದೇಶಭಕ್ತಿಯನ್ನು ಅಳಿಯಲು ಬಳಸಲಾಗುತ್ತದೆ” ಎಂದು ಆರೋಪಿಸಿದ್ದಾರೆ.
“ರಾಜಕೀಯ ಪಕ್ಷಗಳು ತಮ್ಮ ಸಭೆ ಸಮಾರಂಭಗಳು ಆರಂಭವಾಗುವ ಮುನ್ನವೇಕೆ ರಾಷ್ಟ್ರಗೀತೆಯನ್ನು ಹಾಕುವುದಿಲ್ಲ? ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಹಾಕಬೇಕು? ದೇಶದಲ್ಲಿರುವ ಎಲ್ಲಾ ಕಚೇರಿಗಳಲ್ಲೂ ರಾಷ್ಟ್ರಗೀತೆ ಮೊಳಗಬೇಕು. ಯಾರು ಕಾನೂನನ್ನು ಮಾಡುತ್ತಾರೋ ಅವರು ಕೂಡ ಅದನ್ನು ಪಾಲಿಸಬೇಕು” ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.