ನವದೆಹಲಿ: ರಾಷ್ಟ್ರ ರಾಜಧಾನಿಯ ಬಾರಾಖಂಬಾ ಪ್ರದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಒಬ್ಬ ಹೀಲಿಯಂ ಅನಿಲವನ್ನು ಉಸಿರಾಟಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಅದಕ್ಕೂ ಮುನ್ನಾ ಆತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದ ಸಂದೇಶ ಇದೀಗ ಸುದ್ದಿಯಾಗಿದೆ.
ಮೃತನನ್ನು ಗುರುಗ್ರಾಮ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಧೀರಜ್ ಕನ್ಸಾಲ್ ಎಂದು ಗುರುತಿಸಲಾಗಿದೆ. ಇಂಡಿಯಾಮಾರ್ಟ್‌ನಲ್ಲಿ ಹುಡುಕಿದ ನಂತರ ಗಾಜಿಯಾಬಾದ್‌ನ ಪೂರೈಕೆದಾರರಿಂದ ಹೀಲಿಯಂ ಅನಿಲವನ್ನು ಪಡೆದಿದ್ದನು.
ಇನ್ನೂ ಆತ್ಮಹತ್ಯೆಗೆ ಶರಣಾಗುವ ಮುನ್ನಾ ಆತ ಫೇಸ್‌ಬುಕ್‌ನಲ್ಲಿ ಬರೆದ ಸಂದೇಶ ಭಾರೀ ಕುತೂಹಲವನ್ನು ಮೂಡಿಸಿದೆ.
“ಸಾವು ನನಗೆ ಜೀವನದ ಅತ್ಯಂತ ಸುಂದರವಾದ ಕ್ಷಣ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹ*ತ್ಯೆ ತಪ್ಪಲ್ಲ ಏಕೆಂದರೆ ನನ್ನ ಮೇಲೆ ನನಗೆ ಯಾವುದೇ ಜವಾಬ್ದಾರಿಗಳಿಲ್ಲ.” ಎಂದು ಬರೆದುಕೊಂಡಿದ್ದ.
ಧೀರಜ್ ಕನ್ಸಾಲ್ ಜುಲೈ 20 ರಿಂದ 28 ರವರೆಗೆ ಎಂಟು ದಿನಗಳಿಗೆ ಫ್ಲಾಟ್ ಬುಕ್ ಮಾಡಿದ್ದ. 3,500 ರೂ.ನೀಡಿ ಹೀಲಿಯಂ ಖರೀದಿಸಿದ್ದ ಎಂದು ತಿಳಿದು ಬಂದಿದೆ.
ನನ್ನ ನಿರ್ಧಾರಕ್ಕೆ ಯಾರನ್ನೂ ದೂಷಿಸಬಾರದುಎಂದು ಸ್ಪಷ್ಟಪಡಿಸಿ, ಇದು ನನ್ನ ಆಯ್ಕೆ. ನನ್ನ ಜೀವನದಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ನಿಜವಾಗಿಯೂ ದಯೆ ತೋರಿಸಿದ್ದರು. ಆದ್ದರಿಂದ ದಯವಿಟ್ಟು ಈ ಕಾರಣದಿಂದಾಗಿ ಯಾರಿಗೂ ತೊಂದರೆ ನೀಡಬೇಡಿ ಎಂದು ನಾನು ಪೊಲೀಸರು ಮತ್ತು ಸರಕಾರವನ್ನು ವಿನಂತಿಸಿಕೊಳ್ಳುತ್ತೇನೆ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾನೆ.
ತನ್ನ ಅಸ್ತಿತ್ವವನ್ನು ಸುಳ್ಳು ಎಂದು ಬಣ್ಣಿಸಿ, ಈ ಭೂಮಿಯ ಮೇಲೆ ಮತ್ತೆ ಹುಟ್ಟಲು ಬಯಸುವುದಿಲ್ಲ, ನನ್ನನ್ನು ನು ದ್ವೇಷಿಸುತ್ತೇನೆ,ನಾನು ಸೋತವನು ಎಂದು ಜಿಗುಪ್ಸೆಯಿಂದ ಬರೆದುಕೊಂಡಿದ್ದಾನೆ.