ನಿಮ್ಮ ಸುಖ, ದುಃಖ ಹಂಚಿಕೊಳ್ಳಲು ನಾನು ಬಂದಿದ್ದೇನೆ. ನಿಮ್ಮ ಸೇವಕನಾಗಿ ಇಲ್ಲಿಗೆ ಆಗಮಿಸಿರುವೆ ಎಂದು ಭಾವುಕರಾಗಿ ಹೇಳಿದರು. ಕೃಷಿ ನಂತರ ಜವಳಿ ಉದ್ಯಮದಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿದರು. ಭಾರತೀಯ ಜವಳಿ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯಿದೆ. ಇಷ್ಟು ದೊಡ್ಡ ಮಾರುಕಟ್ಟೆಯ ಅಗತ್ಯ ಪೂರೈಸಿ. ಜವಳಿ ಉದ್ಯಮದ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ ಅಗತ್ಯ. ನೇಕಾರರು ಅಭಿವೃದ್ಧಿ ಹೊಂದಬೇಕಾದರೆ ದೂರದೃಷ್ಟಿ ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದರು. ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಮುಖಂಡರು ಪ್ರಧಾನಿಯನ್ನು ಸ್ವಾಗತಿಸಿದರು. ವಾರಾಣಸಿಯ ಲಾಲ್‌ಪುರದಲ್ಲಿ ನೇಕಾರರ ವ್ಯಾಪಾರ ಸೌಲಭ್ಯ ಕೇಂದ್ರಕ್ಕೆ ಮೋದಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಮೋದಿ ನಾನು ಇಂದು ನನ್ನವರ ಬಳಿ ಬಂದಿದ್ದೇನೆ. ಬನಾರಸ್ ನನ್ನನ್ನು ತನ್ನವರನ್ನಾಗಿಸಿಕೊಂಡಿದೆ.
ಜವಳಿ ಉದ್ಯಮಕ್ಕೆ ಸಮಾಜವನ್ನು ಬೆಸೆಯುವ ಶಕ್ತಿಯಿದೆ. ನಾನು ವಾರಾಣಸಿ ಕ್ಷೇತ್ರದ ಸಂಸದನಲ್ಲ, ಸೇವಕ ಎಂದು ಪ್ರಧಾನಿ ನುಡಿದರು. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಜಯಪುರ ಗ್ರಾಮವನ್ನು ಪ್ರಧಾನಿ ದತ್ತುಪಡೆಯಲಿದ್ದು, 2 ದಿನಗಳ ಕಾಲ ಮೋದಿ ವಾರಾಣಸಿ ಪ್ರವಾಸ ಮಾಡಲಿದ್ದಾರೆ.