ತಮಿಳುನಾಡು ಜನರ ಮತ್ತು ಇತರ ರಾಜ್ಯಗಳ ಮತ್ತು ಜಗತ್ತಿನಾದ್ಯಂತ ಇರುವ ನನ್ನ ಬೆಂಬಲಿಗರ ನಿರಂತರ ಪ್ರಾರ್ಥನೆ, ಹರಕೆಗಳ ಫಲವಾಗಿ ನನಗೆ ಪುನರ್ಜನ್ಮ ಸಿಕ್ಕಿದೆ. ಇದನ್ನು ಹೇಳಲು ನನಗೆ ಸಂತೋಷವಾಗುತ್ತಿದೆ. ಜನರ ಪ್ರೀತಿ ನನ್ನ ಮೇಲಿರುವುದರಿಂದ ಯಾವ ಕೆಟ್ಟ ಶಕ್ತಿಯೂ ನನ್ನನ್ನು ಬಾಧಿಸಲು. ದೇವರ ದಯೆಯಿಂದ ಸಂಪೂರ್ಣ ಗುಣಮುಖಳಾಗಿ ಜನರ ಸೇವೆಗಿಳಿಯುತ್ತೇನೆ ಎಂದು ಜಯಾ ಹೇಳಿದ್ದಾರೆ.
ಎಐಡಿಎಂಕೆ ಪ್ರಧಾನ ಕಚೇರಿಯಲ್ಲಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನೀಡಿರುವ 2 ಪುಟಗಳ ಹೇಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಜಯಾ, ತಂಜಾವೂರು, ಅರಾವಕ್ಕುರುಚಿ, ತಿರುಪ್ಪರನ್ ಕುಂಡ್ರಂ ಮತ್ತು ಪಾಂಡಿಚೇರಿಯ ನೆಲ್ಲಿ ದೊಪೆ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 19ರಂದು ನಡೆಯಲಿರುವ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.