ಮಾಸಿಕ ಕಂತುಗಳಲ್ಲಿ ಲಂಚ: ಆದಾಯ ತೆರಿಗೆ ಅಧಿಕಾರಿ ಸಿಬಿಐ ಬಲೆಗೆ

ಗುರುವಾರ, 29 ಡಿಸೆಂಬರ್ 2016 (14:38 IST)
ನೋಟು ನಿಷೇಧದಿಂದಾಗಿ ಜನತೆಗೆ ಹೊಸ ನೋಟುಗಳಲ್ಲಿ ಲಂಚ ಕೊಡುವುದು ಕೂಡಾ ಕಠಿಣವಾಗಿದೆ. ಆದರೆ, ಕೆಲ ಅಧಿಕಾರಿಗಳು ವಿಚಿತ್ರ ದಾರಿಗಳನ್ನು ಕಂಡು ಹಿಡಿಯುತ್ತಿದ್ದು, ಲಂಚದ ಹಣವನ್ನು ಮಾಸಿಕ ಕಂತುಗಳಲ್ಲಿ ನೀಡುವಂತೆ ಒತ್ತಾಯಿಸಿದ ವಿಚತ್ರ ಘಟನೆ ವರದಿಯಾಗಿದೆ. 
 
ವಿಶಾಖಪಟ್ಟಣಂ ನಗರದ ಆದಾಯ ತೆರಿಗೆ ಆಧಿಕಾರಿಯೊಬ್ಬರು ಲಂಚದ ಹಣವನ್ನು ಮಾಸಿಕವಾಗಿ ಪಡೆಯುತ್ತಿರುವ ಸಂದರ್ಭದಲ್ಲಿ  ಬಲೆಗೆ ಬಿದ್ದಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
 
ಆದಾಯ ತೆರಿಗೆ ಅಧಿಕಾರಿ ಬಿ.ಶ್ರೀನಿವಾಸ್ ರಾವ್, ಬಿಲ್ಡರ್‌ರೊಬ್ಬರಿಗೆ ಪುನರ್‌ನಿರ್ಮಾಣಕ್ಕಾಗಿ ಖಾಲಿ ನಿವೇಶನ ನೀಡಿದ ವ್ಯಕ್ತಿಗೆ 1.5 ಲಕ್ಷ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.   
 
ಶ್ರೀನಿವಾಸ್ ಒತ್ತಡದಿಂದ ಕಂಗಾಲಾದ ವ್ಯಕ್ತಿ, ನೋಟು ನಿಷೇಧದಿಂದಾಗಿ ಬ್ಯಾಂಕ್‌ಗಳಲ್ಲಿ ಹಣ ಹಿಂಪಡೆಯುವುದು ಕಷ್ಟವಾದ ಹಿನ್ನೆಲೆಯಲ್ಲಿ ಲಂಚದ ಹಣ ಒಂದೇ ಬಾರಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ.  
 
ಶ್ರೀನಿವಾಸ್ ರಾವ್, ಲಂಚದ ಹಣವನ್ನು ಮಾಸಿಕ ಕಂತುಗಳಲ್ಲಿ ನೀಡುವಂತೆ ವ್ಯಕ್ತಿಗೆ ತಿಳಿಸಿದ್ದಾರೆ. ಮೊದಲ ಮಾಸಿಕ ಕಂತು 30ಸಾವಿರ ರೂಪಾಯಿ ಪಾವತಿಸುವ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳಉ ಆದಾಯ ತೆರಿಗೆ ಇಲಾಖೆ ಅಧಿಕಾರಿ ಶ್ರೀನಿವಾಸ್ ರಾವ್ ಅವರನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ