ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುತ್ತೇನೆ : ಉಮಾಭಾರತಿ

ಗುರುವಾರ, 2 ಫೆಬ್ರವರಿ 2023 (10:28 IST)
ಭೋಪಾಲ್ : ಶೀಘ್ರದಲ್ಲಿಯೇ ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಉಮಾಭಾರತಿ ಭೋಪಾಲ್ನಲ್ಲಿ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ. ಕ್ಷೇತ್ರ ಭೇಟಿಯ ಕೊನೆಯ ದಿನವಾದ ಇಂದು ರಾಜ್ಯದಲ್ಲಿ ಆಲ್ಕೋಹಾಲ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ.

ಈ ಹಿನ್ನೆಲೆಯಲ್ಲಿ ಶೀಘ್ರವೇ ಮದ್ಯದಂಗಡಿಗಳಲ್ಲಿ ಗೋ ಶಾಲೆ ಆರಂಭಿಸುವುದಾಗಿ ಘೋಷಿಸಿದರು. ಅಲ್ಲದೆ ರಾಜ್ಯ ಸರ್ಕಾರ ಮದ್ಯನೀತಿಯ ಕುರಿತು ಘೋಷಣೆ ಮಾಡಲು ತಡಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಓರ್ಚಾದಲ್ಲಿರುವ ಮದ್ಯದಂಗಡಿ ಹೊರಗೆ 11 ಹಸುಗಳನ್ನು ಕಟ್ಟಿಹಾಕಲು ವ್ಯವಸ್ಥೆ ಮಾಡಲು ತಿಳಿಸಿದ್ದೇನೆ. ಅಲ್ಲದೆ ಅವುಗಳಿಗೆ ಮೇವು ಹಾಗೂ ನೀರಿನ ವಯವಸ್ಥೆಯನ್ನೂ ಮಾಡಲು ತಿಳಿಸಿದ್ದೇನೆ. ನನ್ನನ್ನು ತಡೆಯುವ ಧೈರ್ಯ ಯಾರಿಗಿದೆ ಎಂದು ನೋಡೋಣ ಎಂದು ಸವಾಲೆಸೆದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ