ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ರಾಜಕೀಯ ನಿವೃತ್ತಿ; ಯಡಿಯೂರಪ್ಪ
ಶುಕ್ರವಾರ, 22 ಅಕ್ಟೋಬರ್ 2021 (09:45 IST)
ವಿಜಯಪುರ : ಮುಸ್ಲಿಂ ಬಂಧುಗಳಿಗೆ ನಾನು ಬಹಿರಂಗವಾಗಿಯೇ ಪ್ರಶ್ನೆಯೊಂದನ್ನು ಕೇಳಲು ಬಯಸ್ತೇನೆ. ನಾನು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ ಉದಾಹರಣೆ ಕೊಡಿ.
ಕರ್ನಾಟಕದ ಅಲ್ಪಸಂಖ್ಯಾತರಿಗೆ ನನ್ನಿಂದ ಅನ್ಯಾಯವಾಗಿದೆ ಎಂದು ಒಂದು ಉದಾಹರಣೆ ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಎಲ್ಲ ವರ್ಗದ ಜನರನ್ನ ಒಂದೇ ರೀತಿ ನೋಡಿದ್ದಾರೆ. ನಾನು ಸಿಎಂ ಆಗಿದ್ದಾಗಲೂ ಯಾವುದೇ ಭೇದ ಮಾಡಿಲ್ಲ. ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ನೀಡಿ. ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ ಒಂದು ಉದಾಹರಣೆ ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮೋದಿ ಅವರು ಎಲ್ಲ ವರ್ಗದ ಜನರನ್ನು ಒಂದೇ ತಾಯಿ ಮಕ್ಕಳಂತೆ ನೋಡ್ತಿದ್ದಾರೆ. ನಾನು ಸಿಎಂ ಆದ ವೇಳೆಯೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವ ಮಾಡಿಲ್ಲ. ಬಿಜೆಪಿಯ ಐವರು ಸಚಿವರು ಇಲ್ಲಿದ್ದಾರೆ. ಇವರು ಸಿಂದಗಿ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.