ಇಡಿ ಬಲೆಗೆ ನವಾಬ್ ಮಲಿಕ್

ಬುಧವಾರ, 23 ಫೆಬ್ರವರಿ 2022 (13:28 IST)
ಮುಂಬೈ : ಭೂಗತ ಜಗತ್ತಿನ ದೊರೆಗಳಾದ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ನವಾಬ್ ಮಲಿಕ್ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

 
ಅಂಡರ್ ವಲ್ಡ್ ಕೃತ್ಯಗಳಿಗೆ ನೆರವಾಗುವಂತೆ ಅಕ್ರಮ ಹಣ ವರ್ಗಾವಣೆ ಆರೋಪ ನವಾಬ್ ಮಲಿಕ್ ಮೇಲೆ ಕೇಳಿ ಬಂದಿತ್ತು. ಬಳಿಕ ಇಡಿ ನವಾಬ್ ಮಲಿಕ್ರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಅರೆಸ್ಟ್ ಮಾಡಿದೆ.

 
ನವಾಬ್ ಮಲಿಕ್ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಗೆ ಆಗಮಿಸಿದ್ದರು. ಇಡಿ ತನಿಖೆ ವೇಳೆ ಭೂಗತ ಪಾತಕಿಗಳೊಂದಿಗೆ ಒಡನಾಟ, ಅಕ್ರಮ ಆಸ್ತಿ ವ್ಯವಹಾರ ಮತ್ತು ಹವಾಲ ಡೀಲ್ ಬಗ್ಗೆ ಪ್ರಶ್ನೆ ಮಾಡಿದ್ದು, ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್ಎಲ್ಎ) ಅಡಿಯಲ್ಲಿ ನವಾಬ್ ಮಲಿಕ್ ಬಂಧನವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ