ಹಕ್ಕಿ ಜ್ವರದ ಭೀತಿ!

ಶುಕ್ರವಾರ, 25 ಫೆಬ್ರವರಿ 2022 (12:24 IST)
ಹೊಸದಿಲ್ಲಿ :  ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ (ಎಚ್5ಎನ್1) ಕಾಣಿಸಿಕೊಂಡಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
 
ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆ?

ಕಳೆದ ವಾರ ಬಿಹಾರದ ಜಮೀನೊಂದರಲ್ಲಿರುವ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಅದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ಮೃತಪಟ್ಟಿವೆ.

ಮತ್ತೊಂದೆಡೆ, ಮಹಾರಾಷ್ಟ್ರದ ಠಾಣೆ ಹಾಗೂ ಪಾಲ್ಘರ್ ಜಿಲ್ಲೆಗಳಲ್ಲಿರುವ ಕೋಳಿ ಫಾರಂಗಳಲ್ಲಿ ಎಚ್5ಎನ್1 ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಅಲ್ಲದೆ, ಠಾಣೆಯಲ್ಲಿಈಗಾಗಲೇ 25 ಸಾವಿರ ಕೋಳಿಗಳ ಹತ್ಯೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಏನಿದು ಹಕ್ಕಿ ಜ್ವರ?

ಕೋಳಿ ಸೇರಿ ಹಲವು ರೀತಿಯ ಪಕ್ಷಗಳಿಗೆ ಬರುವ ಜ್ವರವೇ ಹಕ್ಕಿ ಜ್ವರವಾಗಿದೆ. ಇವುಗಳಲ್ಲಿಯೇ ಎಚ್5ಎನ್1, ಎಚ್7ಎನ್9, ಎಚ್5ಎನ್6 ಸೇರಿ ಹಲವು ರೀತಿಯ ವೈರಾಣುಗಳಿದ್ದು, ಮಾನವನಿಗೆ ಹರಡುವ ಸಾಧ್ಯತೆ ಇರುವುದರಿಂದ ಹಾಗೂ ಈಗಾಗಲೇ ಹಕ್ಕಿ ಜ್ವರದಿಂದ ಜಗತ್ತಿನಾದ್ಯಂತ ಸಾವಿರಾರು ಜನ ಮೃತಪಟ್ಟಿರುವುದರಿಂದ ಇವುಗಳ ಕುರಿತು ಆತಂಕ ಜಾಸ್ತಿ ಇದೆ.

ಲಕ್ಷಣಗಳೇನು?

ಹಕ್ಕಿ ಜ್ವರದಲ್ಲಿ ಬಹುವಾಗಿ ಎಚ್5ಎನ್1 ಮಾದರಿಯ ಜ್ವರ ಜಾಸ್ತಿಯಾಗಿ ಕಂಡುಬರುತ್ತದೆ. ಈ ವೈರಾಣು ಮನುಷ್ಯನಿಗೆ ಹರಡಿದರೆ ವಾಕರಿಕೆ, ಅತಿಸಾರ, ಕೆಮ್ಮು, ಜ್ವರ, ತಲೆನೋವು, ಉಸಿರಾಟದ ಸಮಸ್ಯೆ, ಮೂಗು ಸೋರುವಿಕೆ, ಗಂಟಲು, ಸ್ನಾಯುನೋವು ಹಾಗೂ ಅಸ್ವಸ್ಥತೆ ಲಕ್ಷಣಗಳು ಕಂಡು ಬರುತ್ತವೆ.

 
ಮುಂಜಾಗ್ರತಾ ಕ್ರಮಗಳೇನು?

* ವೈಯಕ್ತಿಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು

* ಮುಕ್ತ ಮಾರುಕಟ್ಟೆಯಲ್ಲಿ ಮಾಂಸ ಖರೀದಿಸದಿರುವುದು

* ಕೋಳಿ ಫಾರಂಗಳಿಗೆ ತೆರಳಿ ಖರೀದಿ, ಅವುಗಳನ್ನು ಮುಟ್ಟದಿರುವುದು

* ಲಕ್ಷಣ ಕಾಣಿಸಿಕೊಳ್ಳುತ್ತಲೇ ವೈದ್ಯರ ಬಳಿ ತೆರಳುವುದು

* ಅರೆ ಬೆಂದ ಕೋಳಿ ಮಾಂಸ, ಮೊಟ್ಟೆ ಸೇವಿಸದಿರುವುದು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ