ಪತ್ನಿಯನ್ನು ಬೆದರಿಸಲು ಅಶ್ಲೀಲ ವಿಡಿಯೋ ರವಾನಿಸಿ ಅರೆಸ್ಟ್ ಆದ ವ್ಯಕ್ತಿ
ಎರಡು ವರ್ಷಗಳ ಹಿಂದೆ ದಂಪತಿಗೆ ಮದುವೆಯಾಗಿತ್ತು. ಆದರೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು. ಈ ನಡುವೆ ಪತಿ ಮತ್ತು ಆತನ ಸಹಚರ ಬೇರೆ ಬೇರೆ ಮೊಬೈಲ್ ನಂಬರ್ ಗಳಿಂದ ಪತ್ನಿಯ ಸಹೋದರನಿಗೆ ಅಶ್ಲೀಲ ವಿಡಿಯೋ ರವಾನಿಸಿ ಬೆದರಿಕೆ ಹಾಕುತ್ತಿದ್ದರು.
ಈ ಸಂಬಂಧ ಮಹಿಳೆ ಮತ್ತು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.