ಪೈಲಟ್‌ ಅಭಿನಂದನ್‌ ಮೇಲೆ ನಡೆದ ಹಲ್ಲೆ ದೃಶ್ಯಗಳನ್ನು ಕೂಡಲೇ ಡಿಲೀಟ್ ಮಾಡಿ-ಯುಟ್ಯೂಬ್‌ ಗೆ ಭಾರತ ಸರ್ಕಾರ ಸೂಚನೆ

ಶುಕ್ರವಾರ, 1 ಮಾರ್ಚ್ 2019 (11:16 IST)
ನವದೆಹಲಿ : ಅಭಿನಂದನ್‌ ಮೇಲೆ ಪಾಕ್‌ ನಾಗರಿಕರು ಹಲ್ಲೆ ನಡೆಸಿದ ದೃಶ್ಯಗಳು ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಆ ವಿಡಿಯೋಗಳನ್ನು ಮತ್ತು ಅವುಗಳ ಲಿಂಕ್‌ ಗಳನ್ನು ಅಳಿಸಿ ಹಾಕುವಂತೆ ಯುಟ್ಯೂಬ್‌ ಗೆ ಭಾರತ ಸರ್ಕಾರ ಸೂಚಿಸಿದೆ.


ಶತ್ರುಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಪತನಗೊಂಡ ಮಿಗ್‌ ವಿಮಾನದ ಪೈಲಟ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದು ಪಾಕಿಸ್ತಾನ ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಹರಿದಾಡುತ್ತಿದೆ. ಅಭಿನಂದನ್‌ ಮೇಲೆ ನಡೆದ ಅಮಾನವೀಯ ಕೃತ್ಯ ಜಿನೆವಾ ಒಪ್ಪಂದದ ಉಲ್ಲಂಘನೆ ಆಗಿದ್ದು, ಅದನ್ನು ಪ್ರಸಾರ ಮಾಡುವುದು ಸಹ ಕಾನೂನು ಬಾಹಿರ. ಆದ್ದರಿಂದ ಆ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಯುಟ್ಯೂಬ್‌ ಗೆ ಭಾರತ ಸರ್ಕಾರ ಸೂಚಿಸಿದೆ.


ಅದರಂತೆ ಯಟ್ಯೂಬ್‌ನ ಮಾತೃಸಂಸ್ಥೆ ಗೂಗಲ್‌ನ ವಕ್ತಾರರು ಪ್ರತಿಕ್ರಿಯಿಸಿ, ಸರ್ಕಾರ ಕೋರಿಕೆ ಮೇರೆಗೆ ಈಗಾಗಲೇ ಅಂಥಹ ವಿಡಿಯೋ ತೆಗೆದುಹಾಕಲಾಗಿದೆ. ಆದಾಗ್ಯೂ ದಿನನಿತ್ಯ ವಿವಿಧ ಹೆಸರುಗಳಿಂದ ಈ ಕ್ಲಿಪ್ಪಿಂಗ್‌ ಅಪ್‌ಲೋಡ್‌ ಆಗುತ್ತಿದ್ದು, ಅದನ್ನು ಪಾರದರ್ಶಕ ಕಾಯ್ದೆ ಅಡಿ ಅಳಿಸಿಹಾಕಲು ಸಂಸ್ಥೆ ಮುಂದಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ