ಮಹಿಳೆಯೊಂದಿಗೆ ಅನೈತಿಕ ಸಂಬಂಧ: ಅಂತ್ಯ ಹೇಗಾಯಿತು ಗೊತ್ತಾ?

ಬುಧವಾರ, 15 ನವೆಂಬರ್ 2023 (14:08 IST)
27 ವರ್ಷ ವಯಸ್ಸಿನ ಯುವಕ ಅಬ್ಬಾಬಾಯಿ ಅಮಾಲಿ, ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಕುರಿತಂತೆ ವಾದ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಆರೋಪಿಗಳಾದ ತಂದೆ ಮತ್ತು ಮಗ ಯುವಕನಿಗೆ ಹಲವು ಬಾರಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
 
 
ಗುಜರಾತ್‌ನ ವಡೋದರಾ  ನಗರದಲ್ಲಿ ಹಾಡಹಗಲೇ ಇಬ್ಬರು ಆರೋಪಿಗಳು ಯುವಕನೊಬ್ಬನನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.ಸಿಸಿಟಿವಿಯಲ್ಲಿ ಭೀಕರ ಕೃತ್ಯ ಸೆರೆಯಾಗಿದೆ.
 
ಯುವಕ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಮಧ್ಯೆ ಬಿದ್ದು ನರುಳಾಡಿದರೂ ಯಾರು ನೆರವಿಗೆ ಬರಲಿಲ್ಲ ಎನ್ನಲಾಗಿದೆ. ರಸ್ತೆಯ ಮೇಲೆ ಜನರು ಓಡಾಡುತ್ತಿದ್ದರೂ ಯುವಕನನ್ನು ರಕ್ಷಿಸಲಿಲ್ಲ ಎನ್ನಲಾಗಿದೆ.
 
ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ