ಸ್ಪಾ ಹೆಸರಲ್ಲಿ ಮಾಂಸ ದಂಧೆ ನಡೆಸುತ್ತಿರುವುದು ಪೊಲೀಸ್ ಮಾಹಿತಿ ಮೇರೆಗೆ ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಟಾಸ್ಕ್ ಫೋರ್ಸ್ ಪೊಲೀಸ್ ತಂಡ ಸ್ಪಾ ಮೇಲೆ ದಾಳಿ ಮಾಡಿ 6 ಮಂದಿಯನ್ನು ಬಂಧಿಸಿದೆ. ಆರೋಪಿಗಳೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಮಹಿಳೆಯರು ಕಲ್ಕತ್ತಾ, ಬೆಂಗಳೂರು, ಆಂಧ್ರದವರೆಂದು ತಿಳಿದುಬಂದಿದೆ.
ಮಸಾಜ್ ಮಾಡ್ತೀವಿ.. ಒಳ್ಳೆ ಸರ್ವಿಸ್ ಕೊಡಿಸ್ತೀವಿ.. ವಿವಿಧ ಆಫರ್ಸ್ ನೀಡ್ತೀವಿ ಅಂತಾ ಸ್ಪಾ ಶುರುವಾಗಿತ್ತು. ದಿನದಿಂದ ದಿನಕ್ಕೆ ಕಸ್ಟಮರ್ಸ್ ಸಂಖ್ಯೆ ಜಾಸ್ತಿಯಾಗಿತ್ತು. ಆದಾಯವೂ ಲೆಕ್ಕ ಮೀರಿ ನಿಂತಿತ್ತು. ಆದರೆ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ಬೆಳವಣಿಗೆ ಹೇಗೆ ಸಾಧ್ಯ ಎಂಬುದು ಕೆಲವರ ಅನುಮಾನಕ್ಕೆ ಕಾರಣವಾಗಿತ್ತು. ಹುಡುಕಿ ನೋಡಿದಾಗ ಹೆಣ್ಣುಮಕ್ಕಳನ್ನ ಬಳಸಿಕೊಂಡ ವೇಶ್ಯಾವಾಟಿಕೆ ಜಾಲ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಪೊಲೀಸ್ ಇಲಾಖೆ ತಿಳಿಸಿದ ಮಾಹಿತಿ ಪ್ರಕಾರ, ಮಸಾಜ್ ಪಾರ್ಲರ್ ನಡೆಸುತ್ತಿದ್ದವರು, ಬರುವ ಕಸ್ಟಮರ್ ಜೊತೆ ಹುಡುಗಿಯರಿರುವ ಬಗ್ಗೆ ತಿಳಿ ಹೇಳುತ್ತಾರೆ. ಗಿರಾಕಿ ಓಕೆ ಅಂದರೆ 10,000 ರುಪಾಯಿಗೆ ಡೀಲ್ ಮುಗಿಸುತ್ತಾರೆ ಎಂದು ತಿಳಿಸಿದ್ದಾರೆ. ಸಧ್ಯ ಬಂಧಿತರಿಂದ 26,000 ನಗದು, 9 ಸೆಲ್ಫೋನ್ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಠಾಣೆಯ ವಶಕ್ಕೆ ನೀಡಿದ್ದಾರೆ.