ಉಗ್ರ ಹಫೀಜ್ ಸಯೀದ್ ಪರ ವಿಶ್ವಸಂಸ್ಥೆ ಮುಂದೆ ಅಂಗಲಾಚಿದ ಪಾಕಿಸ್ತಾನ
ಜಾಗತಿಕ ಉಗ್ರ ಎಂಬ ಹಣೆಪಟ್ಟಿ ನೀಡಿದ ಬಳಿಕ ಮುಂಬೈ ದಾಳಿಕೋರ ಹಫೀಜ್ ಸಯೀದ್ ಬ್ಯಾಂಕ್ ಖಾತೆಗಳನ್ನೂ ವಿಶ್ವಸಂಸ್ಥೆ ಮುಟ್ಟುಗೋಲು ಹಾಕಿತ್ತು. ಇದೀಗ ಉಗ್ರನಿಗೆ ತನ್ನ ಕುಟುಂಬ ನಿರ್ವಹಣೆಗೆ ಪಾಕಿಸ್ತಾನ ಕರೆನ್ಸಿ 1,50,000 ಅಂದರೆ 1,000 ಡಾಲರ್ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ.