ಉತ್ತರ ಪ್ರದೇಶ್ ಪೊಲೀಸರಿಗೆ ಇತ್ತೀಚಿಗೆ ಒಂದು ವಿಡಿಯೋ ದೊರೆಯಿತು. ಅದು ರೈಲಿನ ಟಾಯ್ಲೆಟ್‌ರೂಮ್‌ನಲ್ಲಿ ತೆಗೆದುಕೊಂಡಂತಿತ್ತು. ಅದರಲ್ಲಿ ಕ್ಯಾಮರಾವನ್ನು ನೇರವಾಗಿ ನೋಡುತ್ತಿರುವ ಯುವತಿ ಸ್ಥಿರ ಧ್ವನಿಯಲ್ಲಿ ಹೇಳಿದ್ದಾಳೆ: ನನ್ನ ತಂದೆ, ಅಣ್ಣ ನನ್ನನ್ನು ಕೊಲ್ಲಲಿದ್ದಾರೆ. ಈ ಕಾರಣಕ್ಕಾಗಿಯೇ ನನ್ನನ್ನು ಹಳ್ಳಿಗೆ ವಾಪಸ್ ಕರೆದೊಯ್ಯುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದೆ. ನನಗೇನಾದರು ಆದರೆ ಅವರೇ ಕಾರಣರು. ನಾನು ಇಮ್ರಾನ್‌ನನ್ನು ಮದುವೆಯಾಗ ಬಯಸುತ್ತೇನೆ.
ಅಂತರ್ಜಾಲದಲ್ಲಿ ಈ ವಿಡಿಯೋ ಕ್ಲಿಪ್ ನೋಡಿದ ಪೊಲೀಸರು ಆಕೆಯ ಗ್ರಾಮಕ್ಕೆ ಬಂದು, ವಿಡಿಯೋದ ಆಧಾರದ ಮೇಲೆ ತಂದೆ-ತಾಯಿ, ನಾಲ್ಕು ಜನ ಸಹೋದರರು ಸೇರಿದಂತೆ ಮನೆಯ 6 ಜನ ಸದಸ್ಯರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ.