ಸ್ವಾತಂತ್ರ್ಯ ಪಡೆದದ್ದು ಆರ್‌ಸ್ಸೆಸ್ಸೆ ಸಿದ್ದಾಂತಕ್ಕೆ ಒಳಪಡುವಿಕೆಗಾಗಿ ಅಲ್ಲ: ರಾಹುಲ್ ಗಾಂಧಿ
ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತವು ಹೂವಿನ ಗುಚ್ಛದಂತೆ. ಗುಚ್ಚದ ಸೌಂದರ್ಯಕ್ಕೆ ಪ್ರತಿಯೊಂದು ಹೂವಿನ ಪಾತ್ರವಿರುತ್ತದೆ. ಹಾಗಾಗಿ, ಪ್ರತಿಯೊಂದನ್ನೂ ಗೌರವಿಸಬೇಕು ಎಂದರು.
ಬ್ರಿಷಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದದ್ದು ಆರ್‌ಸ್ಸೆಸ್ಸೆ ಸಿದ್ದಾಂತಕ್ಕೆ ಒಳಪಡುವಿಕೆಗಾಗಿ ಅಲ್ಲ. ಕಾಮಗ್ರೆಸ್ ಪಕ್ಷವು ಎಲ್ಲ ಜನರು ಆಳ್ವಿಕೆಯಲ್ಲಿ ಭಾಗಿಯಾಗಬೇಕೆಂಬ ನಿಲುವಿನಲ್ಲಿದೆ. ಅದಲ್ಲದ ಎಲ್ಲ ಜನರ ಧರ್ಮ, ಸಂಸ್ಕೃತಿಯನ್ನು ಗೌರವಿಸುತ್ತದೆ. ಆದರೆ ಇದಕ್ಕೆಲ್ಲ ಬಿಜೆಪಿ ವಿರೋಧಿಸುತ್ತದೆ ಎಂದರು.