India Pakistan Operation Sindoor: ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ, 9 ಕಡೆ ದಾಳಿ Video

Krishnaveni K

ಬುಧವಾರ, 7 ಮೇ 2025 (06:44 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ದಾಳಿ ನಡೆಸಿದೆ. ಆಪರೇಷನ್ ಸಿಂದೂರ್ ಹೆಸರಿನಲ್ಲಿ ಭಾರತ ದಾಳಿ ಆರಂಭಿಸಿದೆ.

ಈ ಮೂಲಕ ಪಹಲ್ಗಾಮ್ ಉಗ್ರ ದಾಳಿಗೆ ತನ್ನ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರರ ಅಡಗುದಾಣಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ತಡರಾತ್ರಿ 1.44 ಕ್ಕೆ ಏರ್ ಸ್ಟ್ರೈಕ್ ನಡೆಸಲಾಗಿದೆ. ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ದಾಳಿ ನಡೆಸಲಾಗಿದೆ.

ದಾಳಿಯಲ್ಲಿ ಸುಮಾರು 30 ಕ್ಕೂ ಹೆಚ್ಚು ಕಡೆ ದಾಳಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.


है देवआदि देव महादेव
हमारे भारत के वीर सैनिकों की रक्षा करना????????????????

भारतीय सेना के जवानों के लिए प्रार्थना कीजिए

हमारे जवान भयानक युद्ध लड़ रहे हैं और हमें सुरक्षित कर रहे हैं????????????????

इस्लामिक आतंकी अड्डों पर भारतीय सेना कहर बनकर टूट रही है????????#OperationSindoor जारी है????

जय हिंद… pic.twitter.com/Q1XroywIgq

— Gagan Pratap ???????? (@GaganPratapMath) May 7, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ