ಭಾರತ- ಚೀನಾದ ಸಂಪರ್ಕ ಸೇತುವೆ ಕುಸಿತ

ಶುಕ್ರವಾರ, 15 ಡಿಸೆಂಬರ್ 2017 (12:27 IST)
ಉತ್ತರಕಾಶಿ: ಭಾರತದ ಉತ್ತರಕಾಶಿ ಹಾಗೂ ಚೀನಾದ ಗಡಿಯ ಸಂಪರ್ಕ ಸೇತುವೆ ಕುಸಿದು ಬಿದ್ದಿದ್ದು, ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ  ಪ್ರಯಾಣಿಕರು, ಶಾಲಾ ಮಕ್ಕಳು, ಶಿಕ್ಷಕರು ಈಗ ಪರದಾಡುತ್ತಿದ್ದಾರೆ.


ನಿಯಮದ ಪ್ರಕಾರ ಈ ಸೇತುವೆಯ ಮೇಲೆ  ಎರಡು ವಾಹನಗಳು ಒಟ್ಟಿಗೆ ಚಲಿಸುವಂತ್ತಿಲ್ಲ, ಆದರೂ ಎರಡು ಲಾರಿಗಳು ಒಮ್ಮೆಲೇ ಚಲಿಸಿದ್ದರಿಂದ ಗಂಗೋತ್ರಿ ಬ್ರಿಡ್ಜ್ ಕುಸಿದು ಬಿದ್ದಿದೆ. ಇದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಸೇತುವೆ ಕುಸಿತದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ