ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ : ಮೋದಿ

ಶುಕ್ರವಾರ, 9 ಸೆಪ್ಟಂಬರ್ 2022 (09:41 IST)
ನವದೆಹಲಿ : ದೇಶದಲ್ಲಿರುವ ಎಲ್ಲರೂ ಒಮ್ಮೆ ಕರ್ತವ್ಯ ಪಥ ನೋಡಿ. ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ ಎಂದು ಕರ್ತವ್ಯ ಪಥ ಉದ್ಘಾಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗಿದ ನಿನ್ನೆಗಳನ್ನು ಬಿಟ್ಟು, ನಾಳೆಯ ದಿನಗಳಲ್ಲಿ ಬಣ್ಣ ತುಂಬುತ್ತಿದ್ದೇವೆ. ಗುಲಾಮಿಯ ಪ್ರತೀಕವಾಗಿದ್ದ ಕಿಂಗ್ಸ್ವೇ ಇತಿಹಾಸ ಸೇರಿದೆ. ಇದು ಕರ್ತವ್ಯ ಪಥ ರೂಪದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿಯನ್ನು ಸ್ಥಾಪಿಸಿದೆ. ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರ ಮೂರ್ತಿ ಇತ್ತು. ಅದೇ ಸ್ಥಳದಲ್ಲಿ ನೇತಾಜಿ ಮೂರ್ತಿ ಸ್ಥಾಪಿಸಲಾಗಿದೆ. ಇದೊಂದು ಐತಿಹಾಸಿಕ, ಅಭೂತಪೂರ್ವ ಕ್ಷಣ ಎಂದರು. 

ಬೋಸ್ ಅವರನ್ನು ಇಡೀ ವಿಶ್ವ ನಾಯಕ ಎಂದು ಒಪ್ಪಿಕೊಂಡಿತ್ತು. ಭಾರತದ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದರು. ಆಧುನಿಕ ಭಾರತ ಕಟ್ಟುವ ಕನಸು ಕಂಡಿದ್ದರು. ಸುಭಾಷ್ ಅಖಂಡ ಭಾರತದ ಮೊದಲ ನಾಯಕ. ಮೊದಲು ಅಂಡಮಾನ್ ಸ್ವಾತಂತ್ರ್ಯ ಗೊಳಿಸಿದ್ದರು. ಅಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರು.

2019 ರಲ್ಲಿ ಗಣರಾಜ್ಯೋತ್ಸವದ ದಿನ ಅಜಾದ್ ಹಿಂದ್ ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವುದು. ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡುವ ಸಂಕಲ್ಪ ಮಾಡುವುದು ಪಂಚ ಪ್ರಾಣ ಸಂಕಲ್ಪ ಭಾಗವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ