India Pakistan: ಭಾರತೀಯ ಸೇನೆಯಿಂದ ಮಧ್ಯಾಹ್ನ ಮಹತ್ವದ ಪತ್ರಿಕಾಗೋಷ್ಠಿ
ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಆರಂಭವಾದಾಗಿನಿಂದ ಪ್ರತಿನಿತ್ಯವೂ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಭಾರತೀಯ ಸೇನಾಧಿಕಾರಿಗಳಿಂದ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಬಿಡುಗಡೆ ಮಾಡಲಾಗುತ್ತಿತ್ತು.
ಇದೀಗ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಸಂಘರ್ಷ ಕೊನೆಗಾಣಿಸಿ ಮಾತುಕತೆಗೆ ಮುಂದಾಗಿದೆ. ಇಂದು ಪಾಕಿಸ್ತಾನದ ಸೇನಾ ಉನ್ನತ ಅಧಿಕಾರಿಗಳು ಮತ್ತು ಭಾರತದ ಸೇನಾ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ.
ಮಾತುಕತೆ ಬಳಿಕ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಧ್ಯಮಗಳ ಮುಂದೆ ಭಾರತೀಯ ಸೇನೆಯ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿರುವ ನೀಡಲಾಗುವ ಮಾಹಿತಿಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.