ನವದೆಹಲಿ: ತನ್ನ ವಿರುದ್ಧ ಉಗ್ರರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ಮಾಡಿದ ಭಾರತ ಸಾಧಿಸಿದ್ದೇನು ಇಲ್ಲಿದೆ ಲಿಸ್ಟ್.
ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಉಗ್ರರು ಅಮಾಯಕ ಹಿಂದೂ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದ ಬಳಿಕ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿತು. ಈ ಆಪರೇಷನ್ ಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಯಿತು. ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಪಾಕ್ ಗೆ ಭಾರೀ ಹೊಡೆತ ನೀಡಿದೆ. ಇದೀಗ ಅಮೆರಿಕಾ ಮಧ್ಯಸ್ಥಿಕೆಯಿಂದಾಗಿ ಕದನ ವಿರಾಮ ಘೋಷಿಸಲಾಗಿದೆ.
ಈ ದಾಳಿಯಿಂದ ಭಾರತ ಸಾಧಿಸಿದ್ದು ಏನು ಎಂಬುದಕ್ಕೆ ಇಲ್ಲಿದೆ ಉತ್ತರ
-ಆಧುನಿಕ ಭಾರತದ ಮಿಲಿಟರಿ ಶಕ್ತಿ ಈಗ ಜಗಜ್ಜಾಹೀರಾಗಿದೆ. ಇದುವರೆಗೆ ಭಾರತದ ಏರ್ ಡಿಫೆನ್ಸ್ ಇಷ್ಟು ಪ್ರಬಲವಾಗಿದೆ ಎಂದು ದೇಶದ ಜನರಿಗೇ ಬಹುಶಃ ಗೊತ್ತಿರಲಿಲ್ಲ. ಆದರೆ ಈಗ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾವೂ ಬೆಚ್ಚಿಬಿದ್ದಿದೆ.
-ದಾಳಿಯಿಂದ ಸುಮಾರು 100 ಉಗ್ರರು ಹತರಾಗಿದ್ದರೆ, ಅವರ ಅಡಗುದಾಣಗಳು, ಮನೆಗಳನ್ನು ಧ್ವಂಸ ಮಾಡಲಾಗಿದೆ.
-ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ವಿಶೇಷವಾಗಿ ಪಾಕಿಸ್ತಾನದ ಅಣ್ವಸ್ತ್ರ ಭಂಡಾರವಿರುವ ಸರ್ಗೋಧಾ ಮೇಲೆ ದಾಳಿ ನಡೆಸಲಾಗಿದೆ. ಇನ್ನೊಂದು ಪ್ರಮುಖ ವಾಯುನೆಲೆಯಾದ ನೂರ್ ಖಾನ್ ವಾಯುನೆಲೆಯೂ ಧ್ವಂಸವಾಗಿದೆ.
-ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್ ಸೇರಿದಂತೆ ಉಗ್ರ ಸಂಘಟನೆಗಳ ಪ್ರಮುಖ ನೇತಾರರು ಹತ್ಯೆಯಾಗಿದ್ದಾರೆ. ವಿಶೇಷವಾಗಿ ಉಗ್ರ ಮಸೂದ್ ಅಜರ್ ನ ಕುಟುಂಬ ಸರ್ವನಾಶವಾಗಿದೆ.
-ಭಾರತದ ದಾಳಿಗೆ ಸುಮಾರು 25-30 ಪಾಕಿಸ್ತಾನ್ ಸೈನಿಕರು ಹತರಾಗಿದ್ದಾರೆ ಎಂದು ಡಿಜಿಎಂಒ ರಾಜೀವ್ ಘಾಯ್ ಹೇಳಿದ್ದಾರೆ.