ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್

ಶುಕ್ರವಾರ, 7 ಅಕ್ಟೋಬರ್ 2022 (10:25 IST)
ಜೈಪುರ : ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ ಅನ್ನು ಇಂದು ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
 
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರ ಉಪಸ್ಥಿತಿಯಲ್ಲಿ ಜೋಧಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚಂಡ್ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಬೆಂಗಳೂರಿನಲ್ಲಿರುವ ಹೆಚ್ಎಎಲ್ ಈ ಲಘು ಯುದ್ಧ ಹೆಲಿಕಾಪ್ಟರ್ ನಿರ್ಮಿಸಿದ್ದು ಇದು ಭಾರತೀಯ ವಾಯು ಮತ್ತು ಭೂ ಸೇನೆಗೆ ಹೆಚ್ಚು ಬಲ ತಂದು ಕೊಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ