ಮಕ್ಕಳ ಸಾವು : ಕೆಮ್ಮಿನ ಸಿರಪ್ ವಿರುದ್ಧ ತನಿಖೆ ತೀವ್ರ

ಶುಕ್ರವಾರ, 7 ಅಕ್ಟೋಬರ್ 2022 (08:58 IST)
ನವದೆಹಲಿ : ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ 4 ಕೆಮ್ಮಿನ ಸಿರಪ್ ಉತ್ಪನ್ನಗಳು ಸಂಬಂಧಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬಳಿಕ,
 
ಭಾರತ ಸರ್ಕಾರ ಹರಿಯಾಣ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿದೆ.ಮೂಲಗಳ ಪ್ರಕಾರ WHO ಸೆಪ್ಟೆಂಬರ್ 29ರಂದು ಕೆಮ್ಮಿನ ಸಿರಪ್ಗಳ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ ಎಚ್ಚರಿಕೆ ನೀಡಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಕ್ಷಣವೇ ಈ ವಿಷಯವನ್ನು ಹರಿಯಾಣ ನಿಯಂತ್ರಣ ಪ್ರಾಧಿಕಾರದೊಂದಿಗೆ ಕೈಗೆತ್ತಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ