ರಾಯ್ಪುರ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಅತಿ ಉದ್ದವಾದ ಸರಕು ರೈಲನ್ನು ಪರೀಕ್ಷಿಸಲಾಗಿದೆ. ಬರೋಬ್ಬರಿ 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ರೈಲು ಛತ್ತೀಸ್ಗಢದ ಕೊರ್ಬಾದಿಂದ ನಾಗಪುರದ ರಾಜನಂದಗಾವ್ಗೆ ಓಡಾಟ ನಡೆಸಿದೆ.
ಸೂಪರ್ ವಾಸುಕಿ ರೈಲು ಇದುವರೆಗೆ ಭಾರತೀಯ ರೈಲ್ವೇಯಿಂದ ನಡೆಸಲ್ಪಟ್ಟ ಅತಿ ಉದ್ದವಾದ ಹಾಗೂ ಭಾರವಾದ ಸರಕು ಸಾಗಣೆ ರೈಲಾಗಿದೆ. ಇದು ರೈಲ್ವೇ ನಿಲ್ದಾಣವನ್ನು ದಾಟಲು ಸುಮಾರು 4 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
295 ಬಂಡಿಗಳುಳ್ಳ ರೈಲು ಸುಮಾರು 27 ಸಾವಿರ ಟನ್ ಕಲ್ಲಿದ್ದಲನ್ನು ಹೊತ್ತು ಕೋರ್ಬಾದಿಂದ ನಾಗಪುರದ ರಾಜನಂದಗಾವ್ ತಲುಪಿದೆ. ರೈಲು ಸ್ಥಳ ತಲುಪಲು 11:20 ಗಂಟೆಗಳನ್ನು ತೆಗೆದುಕೊಂಡಿದೆ. ಈ ಗೂಡ್ಸ್ ರೈಲಿಗೆ 6 ಎಂಜಿನ್ ಬಳಸಲಾಗಿತ್ತು.
ಸೂಪರ್ ವಾಸುಕಿ ರೈಲು ಒಂದು ಬಾರಿ ಹೊತ್ತೊಯ್ಯಬಲ್ಲ ಕಲ್ಲಿದ್ದಲಿನಿಂದ 3,000 ಮೆಗಾವ್ಯಾಟ್ನ ವಿದ್ಯುತ್ ಸ್ಥಾವರವನ್ನು ಒಂದು ಇಡೀ ದಿನ ಉರಿಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.