ನವದೆಹಲಿ : ಪಾಕಿಸ್ತಾನ ಶತ್ರು ಪಡೆಗಳ ಮೇಲೆ ಶೌರ್ಯ ಮೆರೆದಿದ್ದ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (ಪ್ರಸ್ತುತ ಗ್ರೂಪ್ ಕ್ಯಾಪ್ಟನ್) ಅವರ ಮಿಗ್-21 ಬೈಸನ್ ಫೈಟರ್ ಜೆಟ್ ಇದೇ ಸೆಪ್ಟೆಂಬರ್ 30 ರಂದು ಭಾರತೀಯ ವಾಯುಪಡೆಯಿಂದ ನಿವೃತ್ತಿಯಾಗಲಿದೆ.
ಮಿಗ್-21 ಬೈಸನ್ 1960 ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಆದರೆ 1980ರ ದಶಕಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್ಗಳು ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ.
ಪ್ರಸ್ತುತ 32 ಸ್ಕ್ವಾಡ್ರನ್ಗಳಿಗೆ ಇಳಿಕೆಯಾಗಿದೆ. ಭಾರತೀಯ ವಾಯುಪಡೆಯು ಸದ್ಯ 550 ಫೈಟರ್ ಜೆಟ್ಗಳ ಸಾಮರ್ಥ್ಯಕ್ಕೆ ಇಳಿದಿದ್ದು, ಇನ್ನೂ 200 ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿದೆ.
ಸದ್ಯ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಫೈಟರ್ ಜೆಟ್ (ಶ್ರೀನಗರ ಮೂಲದ ನಂ.51 ಸ್ಕ್ವಾಡ್ರನ್)ಅನ್ನು ಸೆಪ್ಟೆಂಬರ್ 30 ರಂದು ಸೇನೆಯಿಂದ ನಿವೃತ್ತಿಗೊಳಿಸಲಿದ್ದು, 2025ರ ವೇಳೆಗೆ ಹಂತಹಂತವಾಗಿ ಬದಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.