ನವದೆಹಲಿ : ಆಪಲ್ ಕಂಪನಿ ಸೆಪ್ಟೆಂಬರ್ 13ರಂದು ತನ್ನ ಐಫೋನ್ 15 ಜಾಗತಿಕವಾಗಿ ಅನಾವರಣಗೊಳಿಸಿದೆ. ಕಂಪನಿ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 15 ಪ್ರೋ, ಐಫೋನ್ 15 ಪ್ರೋ ಮ್ಯಾಕ್ಸ್ ಹ್ಯಾಂಡ್ಸೆಟ್ಗಳು ಭಾರತದ ನ್ಯಾವಿಗೇಷನ್ ಸಿಸ್ಟಂ ನಾವಿಕ್ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಅನ್ನು ಬೆಂಬಲಿಸಲಿದೆ ಎಂದು ತಿಳಿಸಿದೆ.
ಐಫೋನ್ ನಾವಿಕ್ ಅನ್ನು ತನ್ನ ಉತ್ಪನ್ನಗಳಲ್ಲಿ ಬೆಂಬಲಿಸುವಂತೆ ಮಾಡುತ್ತಿರುವುದು ಇದೇ ಮೊದಲು. ಆದರೆ ಇದು ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರ.
ನಾವಿಕ್ ಭಾರತೀಯ ಬಾಹ್ಯಾಕಾಶ ಸಂಸ್ಥೆ ದಿಂದ ನಡೆಸಲ್ಪಡುತ್ತದೆ. ಐಫೋನ್ 15ನಲ್ಲಿ ಇದರೊಂದಿಗೆ ಗೆಲಿಲಿಯೋ ಹಾಗೂ ಗ್ಲೋನಾಸ್ ನ್ಯಾವಿಗೇಷನ್ ವ್ಯವಸ್ಥೆಗಳು ಕೂಡಾ ಲಭ್ಯವಿರಲಿದೆ.