ದೇಶದ ಭೂ ವೀಕ್ಷಣಾ ಉಪಗ್ರಹ, ಗೂಗಲ್ ಕಂಪನಿಯ ಟೆರ್ರಾ ಬೆಲ್ಲಾ ಸ್ಕೈ ಸ್ಯಾಟ್ ಜೆನ್-2-1 ಮತ್ತು 18 ಇತರ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ 34 ರಾಕೆಟ್ ಬೆಳಿಗ್ಗೆ 9.26ಕ್ಕೆ ಆಕಾಶಕ್ಕೆ ಚಿಮ್ಮಿತು. ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾ ರಾಷ್ಟ್ರಗಳ ಉಪಗ್ರಹಗಳು ಇದರಲ್ಲಿ ಸೇರಿದ್ದು ಕಾರ್ಟೊಸ್ಯಾಟ್–2 ಉಪಗ್ರಹ 727.5 ಕೆ.ಜಿ.ಯ ತೂಕ ಹೊಂದಿದೆ. ಈ ಮೂಲಕ ಒಂದೇ ರಾಕೆಟ್ ಮೂಲಕ ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯ ಮತ್ತು ಪುಣೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಹೊಗಳಿದ ಪ್ರಧಾನಿ ಮೋದಿ, ಉಪಗ್ರಹಗಳನ್ನು ತಯಾರಿಸುವುದರಲ್ಲಿ ಪುಣೆ ಮತ್ತು ಚೆನ್ನೈ ಸಂಸ್ಥೆಗಳ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು. ಅವರ ಆಸಕ್ತಿ ನನ್ನ ಹೃದಯವನ್ನು ತಟ್ಟಿದೆ ಎಂದು ಹೇಳಿದ್ದಾರೆ.