ಎ.ಕೆ. 47 ಸೇರಿ ಅಪಾರ ಶಸ್ತ್ರಾಸ್ತ್ರಗಳ ಜೊತೆ ಭಾರತೀಯ ಯೋಧ ನಾಪತ್ತೆ: ಹೆಚ್ಚಿದ ಆತಂಕ

ಗುರುವಾರ, 6 ಜುಲೈ 2017 (12:09 IST)
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಭಾರತದ ಸೈನಿಕನೊಬ್ಬ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿರುವ ಘಟನೆ ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

 173 ಟೆಮುಲ್ರ್ರಿಟೋರಿಯಲ್ ಆರ್ಮಿಯ ಜಹೂರ್ ಅಹಮ್ಮದ್ ತೋಕರ್ ಎಂಬಾತ ಗಂಟ್ಮುಲ್ಲಾ ಏರಿಯಾದಿಂದ ಎ.ಕೆ. 47 ಗನ್ ಸೇರಿದಂತೆ ಶಸ್ತ್ರಸ್ತ್ರಗಳ ಸಮೇತ ನಾಪತ್ತೆಯಾಗಿದ್ದಾನೆ.

ಯೋಧನ ನಾಪತ್ತೆಯ ಕಾರಣ ನಿಗೂಢವಾಗಿದ್ದು, ಯೋಧನ ಶೋಧಕ್ಕೆ ಕಾರ್ಯಾಚರಣೆ ಶುರುವಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯವರಾದ ಯೋಧ ಜಹೂರ್ ಗಂಟ್ಮುಲ್ಲಾ ಆರ್ಮಿ ಕ್ಯಾಂಪ್`ನಿಂದ ಕಳೆದ ರಾತ್ರಿ ಎಸ್ಕೇಪ್ ಆಗಿದ್ದಾನೆ. ಜಹೂರ್ ಸರ್ವಿಸ್ ರೈಫಲ್ ಸಹ ನಾಪತ್ತೆಯಾಗಿದೆ.

ಭಾರತ-ಪಾಕಿಸ್ತಾನ ಮತ್ತು ಭಾರತ-ಚೀನಾ ಗಡಿಯಲ್ಲಿ ಪ್ರಕ್ಷ್ಉಬ್ದ ವಾತಾವರಣವಿರುವ ೀ ಸಂದರ್ಭದಲ್ಲಿ ಯೋಧ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳು ಹೇಳುವಂತೆ ಮಾಡಿದೆ. ದೇಶ ಕಾಯಬೇಕಾದ ಯೋಧ, ಉಗ್ರರ ಬಲೆಗೆ ಬಿದ್ದನೆ..? ಎಂಬ ಸಂಶಯವೂ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ