ಇಂದಿರಾ ಗಾಂಧಿಗೆ ರಾಜಕೀಯ ಇಷ್ಟವಿರಲಿಲ್ಲ: ಸೋನಿಯಾ ಗಾಂಧಿ

ಮಂಗಳವಾರ, 22 ನವೆಂಬರ್ 2016 (14:01 IST)
ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯಕ್ಕೆ ಸೇರಲು ಆಸಕ್ತಿಯಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
 
ಒಂದು ವೇಳೆ, ಇಂದಿರಾ ಗಾಂಧಿ ರಾಜಕೀಯಕ್ಕೆ ಸೇರ್ಪಡೆಯಾಗದಿದ್ದಲ್ಲಿ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸಲು ಬಯಸಿದ್ದರು ಎಂದು ತಿಳಿಸಿದ್ದಾರೆ.  
 
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ದೇಶದ ಬಗೆಗೆ ಅವರಿಗಿರುವ ಕರ್ತವ್ಯ ನಿಷ್ಠೆ ಮತ್ತು ದೇಶದ ಜನತೆ ಇಂದಿರಾ ಅವರನ್ನು ರಾಜಕೀಯಕ್ಕೆ ಕರೆತಂದರು ಎಂದು ಹೇಳಿದ್ದಾರೆ.  
 
ಇಂದಿರಾ ಗಾಂಧಿಯವರು ತಾವಾಗಿ ರಾಜಕೀಯ ಸೇರಬೇಕು ಎನ್ನುವ ಇಚ್ಚೆಯಿರಲಿಲ್ಲ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಅವರಿಗೆ ರಾಜಕೀಯವೇ ಇಷ್ಟವಿರಲಿಲ್ಲ ಎಂದರು.
 
ಇಂದಿರಾ ಗಾಂಧಿ ದೇಶದ ರಾಜಕೀಯದಲ್ಲಿ ಜಾತ್ಯಾತೀತವಾದವನ್ನು ಬಿತ್ತಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಜನತೆಯೊಂದಿಗಿದ್ದ ಅವರ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಅವರ ಬಹುದೊಡ್ಡ ಶಕ್ತಿಯಾಗಿತ್ತು ಎಂದಿದ್ದಾರೆ.
 
ಇಂದಿರಾಜಿ ಸಹಾನುಭೂತಿ ಮತ್ತು ಪರಾನುಭೂತಿಯುಳ್ಳ ಮಹಿಳೆಯಾಗಿದ್ದರು. ಅದು ಇಂದಿನ ರಾಜಕೀಯದಲ್ಲಿ ಕಾಣೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ