ನಾಯಿ, ಕುದುರೆಗೆ ವಿಶೇಷ ಸೇವಾ ಪದಕ

ಮಂಗಳವಾರ, 25 ಅಕ್ಟೋಬರ್ 2016 (10:37 IST)
ಗ್ರೇಟರ್ ನೋಯ್ಡಾ: ಇಂಡೋ-ಟಿಬೇಟ್ ಗಡಿ ಪ್ರದೇಶ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ನಾಯಿ ಮತ್ತು ಕುದುರೆಗೆ ಟಿಬೇಟ್ ಗಡಿ ಪೊಲೀಸರು ವಿಶೇಷ ಸೇವಾ ಪದಕ ನೀಡಿ ಗೌರವಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಪ್ರಾಣಿಗಳ ಸೇವೆ ಗುರುತಿಸಿ ಗೌರವಿಸಿದ್ದು, ಇದೇ ಮೊದಲಾಗಿದ್ದು ಇದೊಂದು ಐತಿಹಾಸಿಕ ಕಾರ್ಯವಾಗಿ ಬಿಂಬಿತವಾಗಿದೆ. ಈ ವಿಶೇಷ ಸೇವಾ ಪದಕ ಪಡೆದ ಥಂಡರ್ ಬೋಲ್ಟ್ ಹೆಸರಿನ ಕುದುರೆ ಹಾಗೂ ಸೋಫಿಯಾ ಹೆಸರಿನ ನಾಯಿ ಪೊಲೀಸ್ ರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಐಟಿಬಿಒಯ 55ನೇ ಸ್ಥಾಪನಾ ದಿನದಲ್ಲಿ ಆ ಎರಡು ಪ್ರಾಣಿಗಳಿಗೆ ಐಟಿಬಿಪ ಮುಖ್ಯಸ್ಥ ಕೃಷ್ಣ ಚೌಧರಿ ಪದಕ ತೊಡಿಸಿದರು. ಸರಕು ಸಾಗಾಟ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಥಂಡರ್ ಬೋಲ್ಟ್ ಕುದುರೆ ಅತಿ ಎತ್ತರದ ಪ್ರದೇಶದ ಗಡಿ ಚೌಕಿಗಳಿಗೆ ಶಸ್ತ್ರಾಸ್ತ್ರ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಂತೆ ಛತ್ತೀಸಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಚ್ಚಾ ಸ್ಫೋಟಕ ಪತ್ತೆ ಹಚ್ಚುವಲ್ಲಿ ಸೋಫಿಯಾ ತನ್ನ ಚಾಣಾಕ್ಷ್ಯ ಬುದ್ದಿಯನ್ನು ತೋರಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ