ಹಳಿ ತಪ್ಪಿದ ಇಂಧೋರ್-ಪಾಟ್ನಾ ಎಕ್ಸ್ ಪ್ರೆಸ್: ಮೃತರ ಸಂಖ್ಯೆ 91 ಕ್ಕೆ ಏರಿಕೆ
ಭಾನುವಾರ, 20 ನವೆಂಬರ್ 2016 (11:12 IST)
ಕಾನ್ಪುರ: ಇಂಧೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲ್ವೇ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 91 ಕ್ಕೇರಿದೆ. ಇದೇ ವೇಳೆ ರೈಲು ಹಳಿಗಳಲ್ಲಿ ಬಿರುಕು ಉಂಟಾಗಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ನಸುಕಿನ ಜಾವ ನಡೆದ ಘಟನೆಯಾದ್ದರಿಂದ ಪ್ರಯಾಣಿಕರು ನಿದ್ರಾವಸ್ಥೆಯಲ್ಲಿದ್ದರು. ಎರಡು ಬೋಗಿಗಳು ತೀವ್ರವಾಗಿ ಜಖಂಗೊಂಡಿದ್ದು, ಈ ಬೋಗಿಯಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ಯಾಸ್ ಕಟ್ಟರ್ ಗಳನ್ನು ಬಳಸಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಸುರಕ್ಷಿತವಾಗಿರುವ ಪ್ರಯಾಣಿಕರನ್ನು ವಿಶೇಷ ರೈಲುಗಳ ಮೂಲಕ ಪಾಟ್ನಾಕ್ಕೆ ಕರೆತರಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದೆ. ದುರಂತಕ್ಕೀಡಾದವರ ಕುಟುಂಬದವರಿಗೆ ಶೀಘ್ರದಲ್ಲೇ ಪರಿಹಾರ ಧನ ಘೋಷಿಸಲಾಗುವುದು ಎಂದು ರೈಲ್ವೇ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ