ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಮುಗಿದ ಮೇಲೆ ತಾವು ಎರಡು ಮನವಿ ಮಾಡಿಕೊಳ್ಳುವುದಿದೆ ಎಂದು ಇಂದ್ರಾಣಿ ಕೈ ಮೇಲೆತ್ತಿದ್ದಾರೆ. ಅನುಮತಿ ನೀಡಿದ ಬಳಿಕ ನಾನು 15 ತಿಂಗಳಿಂದ ಜೈಲಿನಲ್ಲಿದ್ದೇನೆ. ಸಹಕೈದಿಗಳು ಕಷ್ಟವನ್ನು ನೋಡಿ ಮರುಗಿದ್ದೇನೆ. ನನಗೆ ಯಾವುದೇ ಆಸ್ತಿ ಬೇಕಿಲ್ಲ. ನನ್ನ ಆಸ್ತಿಯ 75ರಷ್ಟನ್ನು ದಾನ ಮಾಡಲು ಬಯಸುತ್ತೇನೆ. ಸತ್ತ ಮೇಲೆ ಅಂಗದಾನವನ್ನು ಮಾಡ ಬಯಸುತ್ತೇನೆ ಎಂದಿದ್ದಾರೆ.
ಎರಡನೆಯದಾಗಿ, ತೀರ್ಪು ಏನೆಂದು ಬರಲಿದೆ ಎಂದು ನನಗೆ ತಿಳಿದಿಲ್ಲ. ನನಗೆ ನೇಣಾಗಬಹುದು, ಜೀವಾವಧಿಯಾಗಬಹುದು ಅಥವಾ ಖುಲಾಸೆಯಾಗಬಹುದು. ಏನೇ ಆಗಲಿ ನಾನು ನನ್ನ ಅಂಗದಾನ ಮಾಡಲು ಬಯಸುತ್ತೇನೆ ಎಂದಿದ್ದಾರೆ ಇಂದ್ರಾಣಿ.
ನೀವು ಕೂಡ ಅಂಗದಾನ ಮಾಡುತ್ತೀರಾ ಎಂದು ಇಂದ್ರಾಣಿ ಮುಖರ್ಜಿ ಪತಿ, ಮಾಜಿ ಮಾಧ್ಯಮ ದೊರೆ ಪೀಟರ್ ಮುಖರ್ಜಿ ಅವರನ್ನು ಕೇಳಲಾಗಿ ನನ್ನ ದೇಹದ ಅಂಗಗಳೆಲ್ಲ ಚೆನ್ನಾಗಿವೆ, ದಾನ ಮಾಡುವ ಉದ್ದೇಶ ನನಗಿಲ್ಲ ಎಂದುತ್ತರಿಸಿದ್ದಾರೆ.