ಅಮೆರಿಕದ 10,000 ಜನರಿಗೆ ಉದ್ಯೊಗ ನೀಡಲು ಮುಂದಾದ ಇನ್ಫೋಸಿಸ್‌

ಮಂಗಳವಾರ, 2 ಮೇ 2017 (22:09 IST)
ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದೆ.
 

ಈ ಕುರಿತು ಅಮೆರಿಕಾದ ಅಮೆರಿಕಾದ ಇಂಡಿಯಾನಾದಿಂದ ಅಧಿಕೃತ ಪ್ರಕಟಣೆ ಹೊರಡಿಸಿರುವ ಇನ್ ಫೋಸಿಸ್, ಅಮೆರಿಕದಲ್ಲಿ ನಾಲ್ಕು ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದೇ ವರ್ಷ ಆಗಸ್ಟ್‌ನಲ್ಲಿ ಇಂಡಿಯಾನಾದಲ್ಲಿ ಒಂದು ಕೇಂದ್ರ ಕಾರ್ಯಾರಂಭಿಸಲಿದೆ ಎಂದು ಹೇಳಿದೆ.

ಇನ್ಫೋಸಿಸ್‌, ಟಾಟಾ ಕನ್ಸಲ್ಟೆನ್ಸಿ ಹಾಗೂ ವಿಪ್ರೋ ಸೇರಿದಂತೆ ಭಾರತೀಯ ಮೂಲದ ಐಟಿ ಸಂಸ್ಥೆಗಳ ಮೇಲೆ ಅಮೆರಿಕದ ರಾಜಕೀಯ ಕೆಂಗಣ್ಣಿಗೆ ಗುರಿಯಾಗಿದ್ದು, ಟ್ರಂಪ್‌ ಸರ್ಕಾರ ಹಲವು ನಿರ್ಬಂಧಗಳನ್ನು ಹೇರುತ್ತಿದೆ. ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಂದ ತಾತ್ಕಲಿಕ ವೀಸಾ ಮೂಲಕ ಅಮೆರಿಕಕ್ಕೆ ಬಂದು ಅಲ್ಲಿನವರ ಉದ್ಯೋಗ ಕಸಿಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕಾರಣಗಳಿಂದಾಗಿ ಇನ್ಫೋಸಿಸ್‌ ಅಮೆರಿಕದಲ್ಲಿಯೇ ನೆಲೆಸಿರುವ 10 ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದೆ.

2014ರಿಂದ ಈವರೆಗೂ 2 ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಲಾಗಿದ್ದು, ಕೃತಕ ಬುದ್ಧಿಮತ್ತೆ ಸಂಬಂಧಿತ ಕ್ಷೇತ್ರದಲ್ಲಿನ ಕಾರ್ಯಗಳಿಗಾಗಿ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇನ್ಫೋಸಿಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್‌ ಸಿಕ್ಕಾ ತಿಳಿಸಿದ್ದಾರೆ.

ಅಮೆರಿಕಾದ ನೌಕರರಿಗೆ ಮೂಲಭೂತ ಮತ್ತು ಬೃಹತ್ ರೀತಿಯಲ್ಲಿ ನಾವೀನ್ಯತೆ ಮತ್ತು ಶಿಕ್ಷಣ ನೀಡಲು ನಮಗೆ ಉತ್ಸುಕವಾಗುತ್ತಿದೆ. ತಂತ್ರಜ್ಞಾನದಲ್ಲಿ ಅತ್ಯಾಧುನಿಕತೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಮ್ಮ ಜಗತ್ತನ್ನು ಆಮೂಲಾಗ್ರವಾಗಿ ರೂಪಾಂತರಗೊಳಿಸಲಿದ್ದು ಈ ಹೊಸ ತಂತ್ರಜ್ಞಾನ ಕಲಿಕೆ ನಮ್ಮ ಕೈಗೆಟಕುವ ಅಂತರದಲ್ಲಿ ಇರುತ್ತದೆ. ಈ ತಂತ್ರಜ್ಞಾನವನ್ನು ಆಧರಿಸಿ ನಮ್ಮ ಗ್ರಾಹಕರಿಗೆ ಎಲ್ಲಾ ಕೈಗಾರಿಕಾ ವಲಯಗಳಲ್ಲಿ ನಾವೀನ್ಯಗಾರರು ಮತ್ತು ಉದ್ಯಮಿಗಳು ಪರಿಹಾರ ಕಂಡುಹಿಡಿಯುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ